ಸ್ಪೇನ್ ರಾಜಕುಮಾರಿ ಕೊರೋನ ವೈರಸ್‌ಗೆ ಬಲಿ

Update: 2020-03-29 16:24 GMT

ಮ್ಯಾಡ್ರಿಡ್ (ಸ್ಪೇನ್), ಮಾ. 29: ಸ್ಪೇನ್‌ನಲ್ಲಿ ಕೊರೋನವೈರಸ್ ಸಾಂಕ್ರಾಮಿಕದ ದಾಳಿಗೆ ಆ ದೇಶದ ರಾಜಕುಮಾರಿಯೇ ಬಲಿಯಾಗಿದ್ದಾರೆ.

86 ವರ್ಷದ ಮರಿಯಾ ತೆರೇಸಾ ಕೋವಿಡ್-19 ಸೋಂಕಿಗ ಒಳಗಾದ ಬಳಿಕ ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ಹಾಗೂ ರಾಜಕುಮಾರ ಸಿಕ್‌ಸ್ಟೊ ಎನ್‌ರಿಕ್ ಡಿ ಬಾರ್ಬಾನ್ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ ಎಂದು ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ. ರಾಜಕುಮಾರಿ ಸ್ಪೇನ್ ದೊರೆ ಆರನೇ ಫಿಲಿಪ್‌ರ ಸೋದರ ಸಂಬಂಧಿಯಾಗಿದ್ದರು.

‘‘ಇಂದು ಮಧ್ಯಾಹ್ನ, ನಮ್ಮ ಸಹೋದರಿ ಮರಿಯಾ ತೆರೇಸಾ ಡಿ ಬಾರ್ಬಾನ್ ಪಾರ್ಮಾ ಪ್ಯಾರಿಸ್‌ನಲ್ಲಿ ನಿಧನರಾದರು. ಅವರು ಕೋವಿಡ್-19 ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು’’ ಎಂದು ರಾಜಕುಮಾರ ಸಿಕ್‌ಸ್ಟೊ ಎನ್‌ರಿಕ್‌ರ ಫೇಸ್‌ಬುಕ್ ಸಂದೇಶ ಹೇಳುತ್ತದೆ.

   1933 ಜುಲೈ 28ರಂದು ಜನಿಸಿದ ರಾಜಕುಮಾರಿ ಮರಿಯಾ ತೆರೇಸಾ ಫ್ರಾನ್ಸ್‌ನಲ್ಲಿ ಕಲಿತು ಮೊದಲು ಪ್ಯಾರಿಸ್‌ನ ಕಾಲೇಜೊಂದರಲ್ಲಿ ಪ್ರೊಫೆಸರ್ ಆದರು. ಬಳಿಕ ಬಳಿಕ ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಪ್ರೊಫೆಸರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News