21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಅಗತ್ಯವಲ್ಲದ ಸರಕುಗಳ ಸಾಗಾಟಕ್ಕೆ ಅವಕಾಶ: ಕೇಂದ್ರ

Update: 2020-03-29 16:22 GMT

ಹೊಸದಿಲ್ಲಿ: 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ಮತ್ತು ಅಗತ್ಯವಲ್ಲದ ಸರಕು ಸಾಗಾಟಕ್ಕೆ ಅವಕಾಶವಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸ್ಪಷ್ಟಪಡಿಸಿದ್ದಾರೆ.

ದಿನಪತ್ರಿಕೆಗಳು, ಹಾಲು ಸರಬರಾಜು ಮತ್ತು ವಿತರಣೆ, ದಿನಸಿ ಸಾಮಗ್ರಿಗಳಿಗೆ ಅವಕಾಶ ನೀಡಲಾಗಿದೆ.

"ಹ್ಯಾಂಡ್ ವಾಶ್ ಗಳು, ಸೋಪ್ ಗಳು, ಬಾಡಿ ವಾಶ್ ಗಳು, ಶ್ಯಾಂಪೂಗಳು, ಸ್ವಚ್ಛತಾ ಉತ್ಪನ್ನಗಳು, ಡಿಟರ್ಜೆಂಟ್ ಮತ್ತು ಟಿಶ್ಯು ಪೇಪರ್ ಗಳು, ಟೂತ್ ಪೇಸ್ಟ್ ಗಳು , ಸ್ಯಾನಿಟರಿ ಪ್ಯಾಡ್ ಗಳು ಮತ್ತು ಡಯಾಪರ್ ಗಳು, ಬ್ಯಾಟರಿ ಸೆಲ್ ಗಳುಮ ಚಾರ್ಜರ್ ಗಳು" ಸಾಗಾಟಕ್ಕೆ ಅವಕಾಶ ನೀಡಲಾಗಿದೆ" ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News