ಮಾ.30ರಿಂದ ಉಚಿತ ಟೆಲಿ ಮೆಡಿಸಿನ್ ಸಲಹೆ ಆರಂಭ

Update: 2020-03-29 16:29 GMT

ಉಡುಪಿ, ಮಾ.29: ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯು ತನ್ನ ಗ್ರಾಹಕರಿಗಾಗಿ ಉಚಿತ ಟೆಲಿ ಮೆಡಿಸಿನ್ ಸಲಹೆಯನ್ನು ಮಾ.30ರಿಂದ ಪ್ರಾರಂಭಿಸಲಿದೆ.

ಗ್ರಾಹಕರು ಅಥವಾ ಹೊಸ ಗ್ರಾಹಕರು ನಾವು ನೀಡುವ ದೂರವಾಣಿಗೆ ತಮ್ಮ ಹೆಸರು, ವಯಸ್ಸು, ಮತ್ತು ಊರಿನ ವಿವರವನ್ನು ತಿಳಿಸಬೇಕು/ನಮ್ಮ ಹಳೆಯ ಗ್ರಾಹಕರು ಅವರ ಹಿಂದಿನ ಸಲಹೆ ಚೀಟಿಯನ್ನು ವಾಟ್ಸಪ್ ಮಾಡಬೇಕು. ಹಾಗೆಯೇ ತಮ್ಮ ವಾಯ್ಸ್ ಮೆಸೇಜ್‌ನಲ್ಲಿ ಅಥವಾ ಬರಹದಲ್ಲಿ ಟೆಲಿಮೆಡಿಸಿನ್ ಸೇವೆಯನ್ನು ಪಡೆಯಲು ಇಚ್ಛಿಸುತ್ತೇವೆ ಎಂದು ಬರೆದು ಅಥವಾ ಹೇಳಿ ತಮ್ಮ ಹೆಸು ಮತ್ತು ವಯಸ್ಸು ತಿಳಿಸಬೇಕು.

ಆಸ್ಪತ್ರೆಯಿಂದ ನಾವು ನಮ್ಮ ಗ್ರಾಹಕರಿಗೆ ಕರೆ ಮಾಡುವ ಸಮಯವನ್ನು ತಿಳಿಸುತ್ತೇವೆ. ನಾವು ಗ್ರಾಹಕರಿಗೆ ದೂರವಾಣಿ ಮೂಲಕ ಸಲಹೆಯನ್ನು ನೀಡು ತ್ತೇವೆ ನಮ್ಮ ಸಲಹೆಯ ನಂತರ ಗ್ರಾಹಕರಿಗೆ ಸಲಹಾ ಚೀಟಿಯನ್ನು ವಾಟ್ಸಪ್ ಮೂಲಕ ನೀಡಲಾಗುವುದು. ನಾವು ತಿಳಿಸಿದ ಔಷಧವನ್ನು ಅವರ ಹತ್ತಿರದ ಔಷಧಿ ಅಂಗಡಿಯಿಂದ ಖರೀದಿಸಬಹುದು. ಗ್ರಾಹಕರು ಟೆಲಿ ಮೆಡಿಸಿನ್ ಸೌಕರ್ಯಕ್ಕೆ ಮೊಬೈಲ್ ಸಂಖ್ಯೆ 9242821215ನ್ನು ಸಂಪರ್ಕಿಸಬೇಕು. ಕರೋನಾ ಎಮರ್ಜೆನ್ಸಿ ಮುಗಿಯುವವರೆಗೆ ಆಸ್ಪತ್ರೆ ಈ ವಿಶಿಷ್ಟ ಉಚಿತ ಸೇವೆ ಯನ್ನು ನೀಡಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News