ಅಕ್ರಮ ಮದ್ಯ ಮಾರಾಟ: ಮಾಹಿತಿ ನೀಡುವಂತೆ ಮನವಿ

Update: 2020-03-29 16:30 GMT

ಉಡುಪಿ, ಮಾ.29: ಕೋವಿಡ್ -19 ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾ ದ್ಯಂತ ಎಲ್ಲ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಟಗಳನ್ನು ನಿಷೇಧಿಸ ಲಾಗಿದ್ದು, ಅಕ್ರಮ ಮಧ್ಯ ಮಾರಾಟ/ಸಾಗಾಟ ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅಬಕಾಡಿ ಉಪ ಆಯುಕ್ತರು ತಿಳಿಸಿದ್ದಾರೆ.

ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ, ಸೇಂದಿಯನ್ನು ತಯಾರಿಸಿ ಮಾರಾಟ ಮಾಡುವುದು ಕಂಡು ಬಂದರೆ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 0820-2532732, ಉಡುಪಿ ವಲಯ 1 ಮತ್ತು 2ರ ಅಬಕಾರಿ ನಿರೀಕ್ಷಕರು(ಮೊ- 9964027232/9448921980), ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು(8277088399), ಕುಂದಾಪುರ ಉಪವಿಭಾಗದ ಅಬಕಾರಿ ನಿರೀಕ್ಷಕರು(7899019906), ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು(9481033662), ಉಡುಪಿ ಉಪವಿಭಾಗದ ಅಬಕಾರಿ ಉಪ ಅಧಿಕ್ಷಕರು(9731860034), ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (9449597104)ರಿಗೆ ಮಾಹಿತಿ ನೀಡಬಹುದು.

ಜಿಲ್ಲಾ ವ್ಯಾಪ್ತಿಯ ಅಬಕಾರಿ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕಚೇರಿಯ ಅಬಕಾರಿ ಉಪ ಅಧೀಕ್ಷಕ ಅಶೋಕ್ ಎಚ್.(9448867015) ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಉಪಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News