ರಜಾ ದಿನಗಳ ವೇತನ ಮತ್ತಿತರ ಸೌಲಭ್ಯಗಳನ್ನು ನೀಡಿ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್

Update: 2020-03-29 16:53 GMT

ಚೇಳಾರಿ, ಮಾ.29: ಕೊರೋನ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಮಾ.11ರಿಂದ ಮದ್ರಸಗಳಿಗೆ ರಜೆ ನೀಡಿದೆ. ಈ ಸಂದರ್ಭ ಮುಅಲ್ಲಿಮರಿಗೆ ರಜೆ ಸಮಯದ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಜಮಾಅತ್/ಮದ್ರಸ ಕಮಿಟಿಯು ನೀಡಬೇಕು ಎಂದು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಅಧ್ಯಕ್ಷ ಪಿ.ಕೆ.ಪಿ. ಅಬ್ಬುಸ್ಸಲಾಂ ಮುಸ್ಲಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ನಿರ್ದೇಶಿಸಿದ್ದಾರೆ.

ದೇಶವು ಅನುಭವಿಸುತ್ತಿರುವ ದುರಂತದಿಂದ ಪಾರಾಗಲು ಮದ್ರಸಗಳಿಗೆ ರಜೆ ಘೋಷಿಸಲಾಗಿದೆ. ಮದ್ರಸಗಳಲ್ಲಿ ಲಭಿಸುವ ಅಲ್ಪವೇತನದಿಂದ ಅಧ್ಯಾಪಕರು ದೈನಂದಿನ ಜೀವನವನ್ನು ಸಾಗಿಸುತ್ತಿದ್ದಾರೆ. ಮದ್ರಸ ಮುನ್ನಡೆಸಲು ಜಮಾಅತ್ ಕಮಿಟಿಯು ಅನುಭವಿಸುತ್ತಿರುವ ತ್ಯಾಗಗಳನ್ನು ಮರೆಯುವಂತಿಲ್ಲ. ಆದರೂ ಅಧ್ಯಾಪಕರಿಗೆ ತಮ್ಮದಲ್ಲದ ಕಾರಣಗಳಿಂದ ನೀಡಿದ ರಜಾ ದಿನಗಳ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಜಂಟಿ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News