‘ವಿಜಯ ಕರ್ನಾಟಕ’ದ ಸಂಪಾದಕರು ಕ್ಷಮೆ ಕೇಳಲಿ: ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹ

Update: 2020-03-29 16:57 GMT

ಮಂಗಳೂರು, ಮಾ.29: ಕೊರೋನ ವೈರಸ್‌ನಿಂದ ಮೃತಪಟ್ಟವರು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂದು ವರದಿ ಮಾಡುವ ಮೂಲಕ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ಪ್ರಯತ್ನ ಮಾಡಿದ ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರು ಕ್ಷಮೆ ಯಾಚಿಸಬೇಕು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯು ಆಗ್ರಹಿಸಿದೆ.

ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್, ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಹೇಳಿಕೆಯೊಂದನ್ನು ನೀಡಿ ‘ಇಂತಹ ವಿಕೃತ ಸುದ್ದಿಯು ಯಾವುದೇ ಪತ್ರಿಕೆಗೂ ಭೂಷಣವಲ್ಲ. ಪತ್ರಿಕೆಯು ಸಮಾಜದಲ್ಲಿ ದ್ವೇಷ ಬೀಜವನ್ನು ಬಿತ್ತುವ ಪ್ರಯತ್ನ ಮಾಡಿದೆ. ಒಂದು ಸಮುದಾಯವನ್ನು ಇತರ ಸಮುದಾಯದವರು ಸಂಶಯ ದೃಷ್ಟಿಯಿಂದ ನೋಡಲಿ ಎಂಬ ಉದ್ದೇಶದಿಂದಲೇ ಇಂತಹ ಸುದ್ದಿಯನ್ನು ಪ್ರಕಟಿಸಿದೆ. ಹಾಗಾಗಿ ಈ ಪತ್ರಿಕೆಯ ಸಂಪಾದಕರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News