ಕೇರಳ: ಮದ್ಯ ಸಿಗದೆ 9 ಮಂದಿ ಸಾವು

Update: 2020-03-29 17:11 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ,ಮಾ.29: ಕೊರೋನ ವೈರಸ್‌ನ ಅಟ್ಟಹಾಸ ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಮದ್ಯ ಸಿಗದೆ ಇದ್ದುದರಿಂದ 9 ಸಾವುಗಳು ಸಂಭವಿಸಿವೆ. ಕೇರಳದಲ್ಲಿ ಕೊರೋನ ವೈರಸ್ ಸೋಂಕಿನಿಂದ ಈವರೆಗೆ ಕೇವಲ ಒಂದು ಸಾವು ಸಂಭವಿಸಿದೆಯಾದರೂ. ಈ ಪೈಕಿ ಮದ್ಯ ದೊರೆಯದೆ ಇದ್ದ ಕಾರಣದಿಂದಾಗಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಏಳು ಮಂದಿ ಮದ್ಯ ದೊರೆಯದೆ ಇದ್ದುದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನೋರ್ವ ತೀವ್ರ ಮದ್ಯಪಾನ ವ್ಯಸನಿಯಾಗಿದ್ದು, ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇನ್ನೋರ್ವ ಶೇವಿಂಗ್ ನಂತರ ಮುಖಕ್ಕೆ ಲೇಪಿಸುವ ಲೋಶನ್ ಕುಡಿದು ಸಾವಿಗೀಡಾಗಿದ್ದಾನೆ.

  ಕೇರಳದಲ್ಲಿ ಈವರೆಗೆ 200 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿದ್ದು ಓರ್ವ ಸಾವನ್ನಪ್ಪಿದ್ದಾನೆ. ಆದರೆ ಲಾಕ್‌ಡೌನ್ ವಿಧಿಸಿದ ಬಳಿಕ ರಾಜ್ಯದಲ್ಲಿ ಬಾರ್, ಹೊಟೇಲ್ ಹಾಗೂ ಕಳ್ಳು ಅಂಗಡಿಗಳು ಸೇರಿದಂತೆ ಮದ್ಯಮಾರಾಟ ಕೇಂದ್ರಗಳನ್ನು ಮುಚ್ಚುಗಡೆಗೊಳಿಸಲಾಗಿದೆ.

 ಈ ಮಧ್ಯೆ ಕೊಟ್ಟಾಯಂಲ್ಲಿ 46 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಇದೇ ಕಾರಣಕ್ಕಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ, ಗಂಭೀರ ಗಾಯಗೊಂಡಿದ್ದಾನೆ. ಆತ ಈಗ ಕೊಟ್ಟಾಯಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 2018ರ ಕೇರಳ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಆ ರ್ಯಾದಲ್ಲಿ ಸುಮಾರು 50 ಸಾವಿರ ಮಂದಿ ಮದ್ಯಪಾನ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News