ಸಜೀಪನಡು: ದಿಗ್ಬಂಧನದ ನಡುವೆವೂ ಬಡವರ ಹಸಿವು ತಣಿಸುತ್ತಿರುವ ಮೂವರ ತಂಡ

Update: 2020-03-29 17:15 GMT

ಬಂಟ್ವಾಳ: ತಾಲೂಕಿನ ಸಜೀಪನಡು ಗ್ರಾಮದಲ್ಲಿ ಹಸುಳೆಗೆ ಕೊರೋನ ವೈರಸ್ ದೃಢಪಟ್ಟ ನಂತರ ಗ್ರಾಮದಲ್ಲಿ ದಿಗ್ಬಂಧನ ವಿಧಿಸಲಾಗಿದ್ದು, ಹೀಗಾಗಿ ಸಂಕಷ್ಟ ದಲ್ಲಿರುವ ಗ್ರಾಮದ ಬಡವರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಮೂವರ ತಂಡ ಮಾನವೀಯತೆ ಮೆರೆಯುತ್ತಿದೆ.

10 ತಿಂಗಳ ಹಸುಳೆಗೆ ಇತ್ತೀಚಿಗೆ ಕೊರೋನ ಸೋಂಕು ಖಚಿತವಾದ ಬಳಿಕ ಗ್ರಾಮದ ಹೊರ ಹಾಗೂ ಒಳ ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೂ ತೀರಾ ಬಡವರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಸಮಾಜ ಸೇವಕರಾದ ಜಸೀಮ್, ಯೂಸುಫ್ ಹಾಗೂ ನಝೀರ್ ಅವರು ಬಡವರಿಗೆ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಸುಮಾರು 30-40 ಮಂದಿಗೆ ಬೇಕಾದ ಊಟವನ್ನು ತಾವೇ ತಯಾರಿಸಿ ಬಡವರ ಮನೆಗೆ ತಲುಪಿಸುತ್ತಿದ್ದಾರೆ. ಅಲ್ಲದೇ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಹಾಗೂ ಗ್ರಾ.ಪಂ ಪಿಡಿಒ ಹಾಗೂ ಸಿಬ್ಬಂದಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News