ದ.ಕ.ಜಿಲ್ಲಾಡಳಿತದಿಂದ ‘ಸಂಗ್ರಹಣಾ ಕೇಂದ್ರ’ ಆರಂಭ

Update: 2020-03-29 17:23 GMT

ಮಂಗಳೂರು, ಮಾ.29: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ‘ಲಾಕ್‌ಡೌನ್’ನಿಂದ ತೊಂದರೆಗೀಡಾದ ಜನರಿಗೆ ನೆರವು ನೀಡುವ ಸಲುವಾಗಿ ದ.ಕ.ಜಿಲ್ಲಾಡಳಿತವು ದಾನಿಗಳಿಂದ ದಿನಸಿ ಸಾಮಗ್ರಿಗಳನ್ನು ಪಡೆಯಲು ‘ಸಂಗ್ರಹಣಾ ಕೇಂದ್ರ’ವನ್ನು ಸ್ಮಾರ್ಟ್ ಸಿಟಿ ಬಿಲ್ಡಿಂಗ್‌ನಲ್ಲಿ ತೆರೆದಿದೆ.

ದಾನಿಗಳು ನೀಡುವ ಕಿಟ್‌ನಲ್ಲಿ ಅಕ್ಕಿ, ತೊಗರಿಬೇಳೆ, ದವಸ ಧಾನ್ಯ, ಸನ್‌ಫ್ಲವರ್ ಎಣ್ಣೆ, ಮಸಾಲೆ ಪ್ಯಾಕ್, ಸಾಂಬಾರು (ಗರಮ್) ಮಸಾಲೆ, ಉಪ್ಪಿನಕಾಯಿ, ತರಕಾರಿಗಳು (ದೀರ್ಘಕಾಲಿಕ)ಒಳಗೊಂಡಿರಬೇಕು.

ಈ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಈ ಬಗ್ಗೆ ಮಾಹಿತಿಗಾಗಿ 1077ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News