ಸ್ಪೇನ್: ಹೊಸದಾಗಿ 832 ಸಾವು

Update: 2020-03-29 18:06 GMT

ಮ್ಯಾಡ್ರಿಡ್ (ಸ್ಪೇನ್), ಮಾ. 29: ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್ ಸಾಂಕ್ರಾಮಿಕ್ಕೆ 832 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಆ ದೇಶದಲ್ಲಿ ಈವರೆಗೆ ಈ ರೋಗದಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 5,690ಕ್ಕೆ ಏರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಇದು ದೇಶದ ದೈನಂದಿನ ಸಾವುಗಳ ಸಂಖ್ಯೆಯಲ್ಲಿ ಹೊಸ ದಾಖಲೆಯಾಗಿದೆ.

ದೇಶದಲ್ಲಿ ಈ ಅವಧಿಯಲ್ಲಿ ಹೊಸದಾಗಿ 8,189 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೊರೋನವೈರಸ್ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 72,248ಕ್ಕೆ ಏರಿದೆ.

ಸ್ಪೇನ್‌ನಲ್ಲಿ ಈವರೆಗೆ 12,285 ಮಂದಿ ಕಾಯಿಲೆಯಿಂದ ಗುಣಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News