ಕೋವಿಡ್ 19: ಪಶ್ಚಿಮ ಬಂಗಾಳದಲ್ಲಿ ಮಹಿಳೆ ಸಾವು

Update: 2020-03-30 05:38 GMT

ಕೋಲ್ಕತ್ತಾ, ಮಾ.30: ಉತ್ತರ ಬಂಗಾಳದ ಸರಕಾರಿ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿತ ಮಹಿಳೆಯೊಬ್ಬರು  ಸೋಮವಾರ ಸಾವನ್ನಪ್ಪಿದ್ದು, ಇದರೊಂದಿಗೆ  ಪಶ್ಚಿಮ ಬಂಗಾಳದಲ್ಲಿ  ಕೋವಿಡ್ -19 ಪ್ರಕರಣದಲ್ಲಿ  ಮೃತಪಟ್ಟವರ  ಸಂಖ್ಯೆ  ಎರಡಕ್ಕೆ ಏರಿದೆ.

ಡಾರ್ಜಿಲಿಂಗ್ ಜಿಲ್ಲೆಯ ಕಾಲಿಂಪಾಂಗ್‌ನ 44 ವರ್ಷದ ಮಹಿಳೆ ಮುಂಜಾನೆ 2 ಗಂಟೆ ಸುಮಾರಿಗೆ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ  ಮೂಲಗಳು ತಿಳಿಸಿವೆ.

ಮೃತ ಮಹಿಳೆ  ಇತ್ತೀಚೆಗೆ ಚೆನ್ನೈನಿಂದ ಹಿಂದಿರುಗಿದ್ದರು.  ಅಲ್ಲಿ ಅವರು ತಮ್ಮ ಮಗಳ ಚಿಕಿತ್ಸೆಗಾಗಿ ಹೋಗಿದ್ದರು.  ಮೃತಪಟ್ಟ ಮಹಿಳೆಯ ಮಗಳು ಮತ್ತು ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕ್ವಾರೆಂಟೈನ್ ಕೇಂದ್ರವೊಂದರಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಕೋಲ್ಕತ್ತಾದ ವೃದ್ಧೆಯೊಬ್ಬರು ಕಳೆದ ವಾರ ಕೋವಿಡ್ -19 ನಿಂದ ಮೃತಪಟ್ಟಿದ್ದರು.

ಎರಡು ಸಾವು ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ  ಪತ್ತೆಯಾಗಿರುವ ಕೋವಿಡ್ -19 ಪ್ರಕರಣಗಳ ಸಂಖ್ಯೆ 21 ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News