×
Ad

ಕೊರೋನ: ಈ ಗ್ರಾಮದ ಜನರ ವಿಚಿತ್ರ ಸಮಸ್ಯೆ ಏನು ಗೊತ್ತೇ?

Update: 2020-03-30 11:37 IST

ಉತ್ತರ ಪ್ರದೇಶ, ಮಾ.30: ವಿಶ್ವಾದ್ಯಂತ ಕೊರೋನ ವೈರಸ್ ಸೋಂಕು ಹರಡಿದ ಬಳಿಕ ಜಿಲ್ಲೆಯ ಈ ಪುಟ್ಟ ಗ್ರಾಮದ ಜನ ವಿಶಿಷ್ಟ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದ ಹೆಸರೇ ಇಲ್ಲಿನ ಜನತೆಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಏಕೆ ಗೊತ್ತೇ? ಈ ಹಳ್ಳಿಯ ಹೆಸರು 'ಕೊರೌನಾ'.

ಈ ಹೆಸರಿನ ಕಾರಣದಿಂದಾಗಿಯೇ ಸಮಾಜದಲ್ಲಿ ತಾರತಮ್ಯ ಎದುರಿಸುವಂತಾಗಿದೆ. ಯಾರೂ ಹೊರಗೆ ಬರಲು ಇಷ್ಟಪಡುತ್ತಿಲ್ಲ. ಗ್ರಾಮದ ಜನ ಭೀತಿಯಿಂದ ಇದ್ದಾರೆ. ನಾವು ಕೊರೌನಾ ಹಳ್ಳಿಯಿಂದ ಬಂದವರು ಎಂದು ಹೇಳಿದ ತಕ್ಷಣ ಇತರರು ನಮ್ಮನ್ನು ದೂರ ಮಾಡುತ್ತಾರೆ. ಇದು ಹಳ್ಳಿಯ ಹೆಸರು; ಕೊರೋನ ವೈರಸ್ ಪೀಡಿತ ಹಳ್ಳಿಯಿಂದ ಬಂದವರಲ್ಲ ಎಂದು ಹೇಳಿದರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರಾದ ರಾಜನ್ ಅಳಲು ತೋಡಿಕೊಳ್ಳುತ್ತಾರೆ.
ಜನ ಎಷ್ಟು ಭಯಪಡುತ್ತಿದ್ದಾರೆ ಎಂದರೆ ನಮ್ಮ ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ. ನಾವು ರಸ್ತೆಯಲ್ಲಿ ಹೋಗುತ್ತಿರುವಾಗ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪೊಲೀಸರು ಪ್ರಶ್ನಿಸುತ್ತಾರೆ. ಕೊರೌನಾ ಗ್ರಾಮಕ್ಕೆ ಎಂದು ಹೇಳಿದರೆ ವಿಚಿತ್ರವಾಗಿ ನಮ್ಮನ್ನು ನೋಡುತ್ತಾರೆ. ಗ್ರಾಮಕ್ಕೆ ಈ ಹೆಸರಿದ್ದರೆ ನಾವೇನು ಮಾಡಬಹುದು ಎಂದು ಸುನೀಲ್ ಪ್ರಶ್ನಿಸುತ್ತಾರೆ.

ನಾವು ದೂರವಾಣಿ ಕರೆ ಮಾಡಿ, ಕೊರೌನದಿಂದ ಮಾತನಾಡುತ್ತಿರುವುದಾಗಿ ಹೇಳಿದರೂ ಜನ ಜೋಕ್ ಎಂದು ತಿಳಿದು ಕರೆ ಕಟ್ ಮಾಡುತ್ತಾರೆ ಎಂದು ರಾಮ್‌ಜೀ ದೀಕ್ಷಿತಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News