ಲೌಕ್‌ಡೌನ್ ನಡುವೆಯೂ ಇವರ ಕಾರ್ಯ ಶ್ಲಾಘನೀಯ!

Update: 2020-03-30 06:09 GMT

ಮಂಗಳೂರು, ಮಾ.30: ದೇಶವೇ ಲಾಕ್‌ಡೌನ್ ಆಗಿ ಜನಸಾಮಾನ್ಯರು ಮನೆಯಲ್ಲಿದ್ದಾರೆ. ವೈದ್ಯರು, ದಾದಿಯರು, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನ ಚಾಲಕರು, ನಿರ್ವಾಹಕರು, ನಿರಾಶ್ರಿತರಿಗೆ, ಬೀದಿಬದಿಗಳಲ್ಲಿ ಆಶ್ರಯ ಪಡೆದವರಿಗೆ ಆಹಾರ ಒದಗಿಸುವವರು, ಪೊಲೀಸರು ಇವರೆಲ್ಲಾ ಸದ್ಯ ಕರ್ತವ್ಯದಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ ನಗರದ ಬೀದಿಗಳಲ್ಲಿ ಸದ್ಯ ಕಾಣ ಸಿಗುವವರು ಪೌರ ಕಾರ್ಮಿಕರು!

ಅಲ್ಲೊಂದು ಇಲ್ಲೊಂದು ದ್ವಿಚಕ್ರ, ಕಾರುಗಳು ಸಾಗಾಟದ ಹೊರತಾಗಿ ನಗರದ ಬೀದಿಗಳು ಸ್ತಬ್ಧಗೊಂಡಿವೆ. ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿವೆ. ಅಂಗಡಿ, ಮಾಲ್‌ಗಳು, ಕಟ್ಟಡಗಳು ಬಾಗಿಲು ಮುಚ್ಚಿವೆ. ನಗರದ ಜಂಕ್ಷನ್‌ಗಳಲ್ಲಿ ಇಂದು ಬಹುತೇಕವಾಗಿ (ಸೆಂಟ್ರಲ್ ಮಾರುಕಟ್ಟೆ ಹೊರತುಪಡಿಸಿ) ಪೊಲೀಸರ ಸಂಖ್ಯೆಯೂ ವಿರಳವಾಗಿದೆ. ಆದರೆ ನಗರದ ಪ್ರಮುಖ ರಸ್ತೆಗಳಲ್ಲಿ ಪೌರ ಕಾರ್ಮಿಕರು ಮಾತ್ರ ಪೊರಕೆ ಹಿಡಿದುಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಬಿಸಿಲು, ಧೂಳಿನ ನಡುವೆಯೂ ಇವರ ಕಾರ್ಯ ಸಾಗಿದೆ. ಇವರ ಕಾರ್ಯಕ್ಕೆ ನಾವು ಭೇಷ್ ಅನ್ನಬೇಕಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News