21 ದಿನಗಳ ಲಾಕ್ ಡೌನ್ ವಿಸ್ತರಿಸುವ ಯೋಜನೆ ಇಲ್ಲ: ಕೇಂದ್ರ ಸರಕಾರ ಸ್ಪಷ್ಟನೆ

Update: 2020-03-30 06:35 GMT

ಹೊಸದಿಲ್ಲಿ, ಮಾ. 30: ದೇಶದಲ್ಲಿ ಘೋಷಣೆಯಾಗಿರುವ  21 ದಿನಗಳ ಲಾಕ್‌ಡೌನ್ ನ್ನು ವಿಸ್ತರಿಸುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ಸೋಮವಾರ ಹೇಳಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು  ಕೇಂದ್ರ ಸರ್ಕಾರವು ಲಾಕ್ ಡೌನ್ ವಿಸ್ತರಿಸುವುದಾಗಿ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ನಿರಾಕರಿಸಿದ್ದಾರೆ.ಇವು ಆಧಾರರಹಿತವಾಗಿವೆ   ಎಂದು ಹೇಳಿದ್ದಾರೆ.

21 ದಿನಗಳ ಲಾಕ್‌ಡೌನ್ ಕರೋನ ವೈರಸ್‌ನ ಹರಡುವಿಕೆಯನ್ನು  ಪರಿಶೀಲಿಸುವ ಗುರಿಯನ್ನು ಹೊಂದಿದೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಏಪ್ರಿಲ್ 14 ರವರೆಗೆ ಮುಂದುವರಿಯದಲಿದೆ. ಮಾರ್ಚ್ 22 ರಂದು ಒಂದು ದಿನದ ಜನತಾ ಕರ್ಫ್ಯೂ ನಂತರ, ಮಾರ್ಚ್ 24 ರಂದು ಪ್ರಧಾನಿ ಮೋದಿ ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದರು. ಲಾಕ್‌ಡೌನ್  ಬಳಿಕ  ಎಲ್ಲಾ ಸಾರ್ವಜನಿಕ ಸಾರಿಗೆಯನ್ನು ನಿಲ್ಲಿಸಲಾಗಿದೆ. ಅನಿವಾರ್ಯವಲ್ಲದ ಎಲ್ಲಾ ಅಂಗಡಿಗಳು ಮತ್ತು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಲಾಕ್ ಡೌನ್ ನಂತರ ದೊಡ್ಡ ನಗರಗಳಿಂದ ವಲಸೆ ಕಾರ್ಮಿಕರು ನಿರುದ್ಯೋಗಿಗಳಾಗಿ  ತಮ್ಮ ಹಳ್ಳಿಗಳಿಗೆ  ಬೃಹತ್ ಸಂಖ್ಯೆಯಲ್ಲಿ  ವಲಸೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News