ಪೊಲೀಸ್ ಅಧಿಕಾರಿ ಜೋಗಿಂದರ್ ಶರ್ಮಾಗೆ ಐಸಿಸಿ ಸೆಲ್ಯೂಟ್

Update: 2020-03-30 08:39 GMT

ಹೊಸದಿಲ್ಲಿ,ಮಾ.29: ಪೊಲೀಸ್ ಅಧಿಕಾರಿಯಾಗಿರುವ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಕೋವಿಡ್ ವೈರಸ್ ವಿರುದ್ಧ ಹೋರಾಡುತ್ತಿರುವುದಕ್ಕೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶ್ಲಾಘನೆ ವ್ಯಕ್ತಪಡಿಸಿದೆ.

2007ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಓವರ್‌ನಲ್ಲಿ ಅಮೋಘ ಬೌಲಿಂಗ್ ಸಂಘಟಿಸಿ ಭಾರತಕ್ಕೆ ಮೊದಲ ಬಾರಿ ವಿಶ್ವಕಪ್ ಗೆಲ್ಲಲು ಪ್ರಧಾನ ಪಾತ್ರವಹಿಸಿದ್ದ ಜೋಗಿಂದರ್ ಪ್ರಸ್ತುತ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ 30,000ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಶರ್ಮಾ ಹೋರಾಡುತ್ತಿದ್ದಾರೆ. ಜಾಗತಿಕ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಟದಲ್ಲಿ ಮಾಜಿ ಕ್ರಿಕೆಟಿಗ, ಪೊಲೀಸ್ ಅಧಿಕಾರಿ ಜೋಗಿಂದರ್ ಶರ್ಮಾ ಗಮನಾರ್ಹ ಕಾಣಿಕೆ ನೀಡುತ್ತಿದ್ದಾರೆ ಎಂದು ಐಸಿಸಿ ಟ್ವೀಟ್ ಮಾಡಿದೆ. 36ರ ಹರೆಯದ ಶರ್ಮಾ ಭಾರತದ ಪರ 2004 ಹಾಗೂ 2007ರ ನಡುವೆ 4 ಏಕದಿನ ಹಾಗೂ 4 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News