ಮಂಗಳೂರು: ಆಸ್ಪತ್ರೆಗೂ ವಿಸ್ತರಿಸಿದ ಟೀಂ ಬಿ- ಹ್ಯೂಮನ್ ಮತ್ತು ಎನ್‌ಎಂಸಿಯ ಆಹಾರ ಪೂರೈಕೆ ಸೇವೆ

Update: 2020-03-30 12:21 GMT

ಮಂಗಳೂರು, ಮಾ.30: ಕೊರೋನ ವೈರಸ್ ಭೀತಿಯಿಂದ ಲಾಕ್‌ಡೌನ್ ಆದ ಪರಿಣಾಮ ನಗರದೆಲ್ಲೆಡೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ಕಳೆದೊಂದು ವಾರದಿಂದ ಆಹಾರ ಪೂರೈಸುವಲ್ಲಿ ಸಕ್ರಿಯವಾಗಿರುವ ಮಂಗಳೂರಿನ ‘ಟೀಂ ಬಿ- ಹ್ಯೂಮನ್ ಮತ್ತು ಎನ್‌ಎಂಸಿ ಮೈದಾನ್ ಯುವಕರ ತಂಡ’ ಈ ಸೇವೆಯನ್ನು ಇದೀಗ ಆಸ್ಪತ್ರೆಗಳಿಗೂ ವಿಸ್ತರಿಸಿದೆ.

ಸಂಕಷ್ಟಕ್ಕೀಡಾಗಿರುವವರ ಕರೆಯೊಂದಕ್ಕೆ ಸ್ಪಂದಿಸಿರುವ ಈ ತಂಡ ರವಿವಾರದಿಂದ ಒಮೇಗಾ ಆಸ್ಪತ್ರೆಗೆ ತೆರಳಿ ಉಪಹಾರ, ಊಟವನ್ನು ವಿತರಿಸಿ ಅಲ್ಲಿರುವ ನೂರಾರು ರೋಗಿಗಳ ಮತ್ತು ಅವರ ಜೊತೆಗೆ ಇರುವವರಿಗೆ ನೆರವಾಗಿದೆ. ಹಾಗೇ ಲೇಡಿಗೋಶನ್ ಆಸ್ಪತ್ರೆಗೂ ಆಹಾರವನ್ನು ವಿತರಿಸಲಾರಂಭಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News