ಮಂಗಳೂರು : ಕಣಚೂರು ಆಸ್ಪತ್ರೆಯಿಂದ ಟೆಲಿಮೆಡಿಸಿನ್ ಸೇವೆ

Update: 2020-03-30 11:33 GMT

ಮಂಗಳೂರು, ಮಾ.30: ಕರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್‌ಡೌನ್ ಘೋಷಣೆಯ ಬಳಿಕ ಜಿಲ್ಲೆಯಲ್ಲಿ ಹಲವು ಆಸ್ಪತ್ರೆಗಳು ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿದೆ.

ಇದರಿಂದ ಅನೇಕ ರೋಗಿಗಳು ಸಕಾಲಕ್ಕೆ ವೈದ್ಯರ ಸಲಹೆ, ಔಷಧಿಗಳು ಸಿಗದೇ ತೊಂದರೆಗೀಡಾಗಿದ್ದಾರೆ. ಇದನ್ನು ಮನಗಂಡು ನಾಟೆಕಲ್‌ನ ಕಣಚೂರು ವೈದ್ಯಕೀಯ ಮಹಾವಿದ್ಯಾಲಯದ ಅಧೀನದಲ್ಲಿರುವ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಆನ್‌ಲೈನ್ ಮೂಲಕ ಟೆಲಿಮೆಡಿಸಿನ್ ಸೇವೆ ಆರಂಭಿಸಿದೆ.

ಈ ಸೇವೆಯಂತೆ ಅಗತ್ಯವಿದ್ದವರು ಮನೆಯಲ್ಲಿಯೆ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ರೋಗಿಗಳ ಆರೋಗ್ಯ ಸಮಸ್ಯೆಗಳಿಗೆ ವಾಟ್ಸ್ಆ್ಯಪ್ ಮೂಲಕ ಸಲಹೆ ಮತ್ತು ಔಷಧಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದಕ್ಕಾಗಿ ಒಂಭತ್ತು ವಿಭಾಗಗಳ ನುರಿತ ತಜ್ಞ ವೈದ್ಯರ ತಂಡ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸೇವೆಗಾಗಿ ಸಿದ್ಧವಾಗಿದೆ ಎಂದು ಕಣಚೂರು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಇದಲ್ಲದೆ ಸಾಮಾಜಿಕ ಜಾಲ ತಾಣಗಳ ಸೇವೆ (ವಾಟ್ಸ್ಆ್ಯಪ್) ಇಲ್ಲದೆ ಇರುವಂತಹ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಣಚೂರು ಆಸ್ಪತ್ರೆಯು ನೇರವಾಗಿ ಆಸ್ಪತ್ರೆಯ ದೂರವಾಣಿ ಸಂಖ್ಯೆಗೆ ಕರೆಮಾಡಿ ರೋಗಿಯು ತಮ್ಮ ರೋಗದ ಲಕ್ಷಣಗಳನ್ನು ತಿಳಿಸಿ ವೈದ್ಯರಿಂದ ನೇರವಾಗಿ ಸಲಹೆಗಳನ್ನು ಪಡೆಯುವಂತೆ ತಿಳಿಸಿದೆ.

ಆಸ್ಪತ್ರೆಯ ದೂರವಾಣಿ ಸಂಖ್ಯೆ 0824-2888000 ಆಗಿದ್ದು. ಈ ಕರೆಯ ಮಿತಿಯು 10 ಮಿಷವಾಗಿದ್ದು ರೋಗಿಗಳು ಸರಿಯಾದ ಮಾಹಿತಿಯನ್ನು ನೀಡಿ ಸೇವೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳಲಾಗಿದೆ.

ಹಾಗೆಯೇ ಕರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕಣಚೂರು ಆಸ್ಪತ್ರೆ ರೋಗಿಗಳ ಕಲ್ಯಾಣಕ್ಕಾಗಿ ಜ್ವರ ಚಿಕಿತ್ಸಾಲಯವನ್ನು ಪ್ರಾರಂಭಿಸಿದ್ದು, ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಆಸ್ಪತ್ರೆಯ ಮುಖ್ಯ ಪ್ರವೇಶದ್ವಾರದಲ್ಲಿ ಚಿಕಿತ್ಸೆ ಲಭ್ಯವಿದ್ದು ರೋಗಿಗಳು ಇದರ ಉಪಯೋಗ ಪಡೆಯಬಹುದು.

ಎಂದಿನಂತೆಯೆ ತುರ್ತು ಚಿಕಿತ್ಸಾ ವಿಭಾಗ (ಎಮೆರ್ಜೆನ್ಸಿ) ತೀವ್ರ ನಿಗಾ ಘಟಕ ವಿಭಾಗ (ಐಸಿಯು), ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ (ಒಬಿಜಿ), ಮಕ್ಕಳ ವಿಭಾಗ (ಪೀಡಿಯಾಟ್ರಿಕ್ಸ್) ಮತ್ತು ತಜ್ಞ ಸೇವೆಗಳು ದಿನದ 24 ಗಂಟೆಗಳವರೆಗೂ ಲಭ್ಯವಿರುತ್ತವೆ ಎಂದು ತಿಳಿಸಲಾಗಿದೆ.

ರೋಗಿಗಳು ಕೋಷ್ಠಕದಲ್ಲಿ ನೀಡಿರುವ ವಾಟ್ಸ್ಆ್ಯಪ್ ನಂಬರ್‌ಗೆ ತಮ್ಮ ರೋಗ ಲಕ್ಷಣ ಮಾಹಿತಿಯನ್ನು ರವಾನಿಸಬೇಕು. ಇದರೊಂದಿಗೆ ಹೆಸರು, ವಯಸ್ಸು, ಲಿಂಗ, ತೂಕ ಖಾಯಿಲೆಯ ವಿವರ ಹಾಗೂ ಹಳೆಯ ಔಷಧಿಗಳಿದ್ದರೆ ಅದರ ಮಾಹಿತಿಯನ್ನು ತಪ್ಪದೆ ನೀಡಬೇಕು. ಇವೆಲ್ಲವನ್ನು ಪರಿಶೀಲಿಸುವ ವೈದ್ಯರು ಅಗತ್ಯವಿದ್ದರೆ ಸಂಬಂಧಪಟ್ಟ ರೋಗಿಗೆ ಕರೆ ಮಾಡುತ್ತಾರೆ. ಇಲ್ಲವಾದರೆ, ಯಾವ ಔಷಧಿ ಸೂಕ್ತ ಎಂಬ ಸಲಹೆಯನ್ನು ವೈದ್ಯರ ನೋಂದಣಿ ಸಂಖ್ಯೆಯಿರುವ ಚೀಟಿಯಲ್ಲಿ ಬರೆದು ರೋಗಿಗಳ ಸಂಖ್ಯೆಗೆ ವಾಟ್ಸ್ಆ್ಯಪ್ ಮಾಡುವರು. ಬಳಿಕ ಔಷಧಿಯನ್ನು ಸಮೀಪದ ಮೆಡಿಕಲ್‌ನಲ್ಲಿ ಪಡೆಯಬಹುದು.

ವಿವಿಧ ಸ್ಪೆಷಾಲಿಟಿ ವಿಭಾಗಗಳು ವಾಟ್ಸ್ಆ್ಯಪ್ ನಂಬರ್

ಸಾಮಾನ್ಯ ವೈದ್ಯಕೀಯ ವಿಭಾಗ 9071399791/9071399792
ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ 9071399793/9071399794
ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ 9071399795/9071399796
ಮೂಳೆ ಮತ್ತು ಎಲುಬು ತಜ್ಞ ವಿಭಾಗ 9071399797/9071399798
ಮನೋರೋಗ ವಿಭಾಗ 9071399799
ಕಿವಿ, ಮೂಗು ಮತ್ತು ಗಂಟಲು ವಿಭಾಗ 9071399800
ಮಕ್ಕಳ ವಿಭಾಗ 9071399801/9071399802
ಚರ್ಮರೋಗ ವಿಭಾಗ 9071399803
ಉಸಿರಾಟೌಷಧ ವಿಭಾಗ (Sht phg) 9071399804/9071399805

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News