‘ಉದ್ಭವ’ ಕೃತಿಯಲ್ಲಿ ಸಂವೇದನೆ:ಪ್ರೊ.ಕೆ.ಪಿ.ರಾವ್

Update: 2020-03-30 14:43 GMT

ಉಡುಪಿ, ಮಾ.30: ತಮ್ಮ ಬಾಲ್ಯದಿಂದಲೇ ಕತೆ-ಕವನಗಳನ್ನು ರಚಿಸುತ್ತಿರುವ ಡಾ. ಮೈನಾ ಆರ್.ಶೆಟ್ಟಿ ಅವರು ತನ್ನ ‘ಉದ್ಭವ’ ಕೃತಿಯಲ್ಲಿ ಸ್ತ್ರೀ ಸಂವೇದನೆಯ ವಿವಿಧ ಮಜಲುಗಳನ್ನು ಅನಾವರಣಗೊಳಿಸಿದ್ದಾರೆ ಎಂದು ಹಿರಿಯ ವಿದ್ವಾಂಸ, ನಾಡೋಜ ಪ್ರೊ.ಕೆ.ಪಿ.ರಾವ್ ಹೇಳಿದ್ದಾರೆ.

ಪ್ರೊ.ಕೆ.ಪಿ.ರಾವ್ ಅವರು ಡಾ. ಮೈನಾ ಆರ್.ಶೆಟ್ಟಿ ಅವರ ಸ್ವರಚಿತ ಕನ್ನಡ ಸಂಪುಟ ‘ಉದ್ಭವ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯ ಮಾಡಿ ಮಾತನಾಡುತ್ತಿದ್ದರು. ಡಾ. ಮೈನಾ.ಆರ್.ಶೆಟ್ಟಿ ಅವರ ಮಣಿಪಾಲ ಅನಂತನಗರದ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಚಿಂತಕ, ಹಿರಿಯ ವಿಚಾರವಾದಿ ಜಿ.ರಾಜಶೇಖರ್ ಅವರು ಅಧ್ಯಕ್ಷತೆ ವಹಿಸಿ ಕೃತಿಯನ್ನು ಬಿಡುಗಡೆಗೊಳಿಸಿದರು. ಸಂಶೋಧಕ ವಿಜಯಕುಮಾರ್ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು.

ಡಾ. ಮೈನಾ ಆರ್.ಶೆಟ್ಟಿ ಸ್ವಾಗತಿಸಿದರು. ಭುವನಪ್ರಸಾದ ಹೆಗ್ಡೆ ವಂದಿಸಿದರು. ನವಯುಗ ಪ್ರಶಾಂತ ಶೆಟ್ಟಿ, ಸಮರ್ಥ್ ಶೆಟ್ಟಿ, ಶ್ರುತಿಕಾ ಶೆಟ್ಟಿ, ಆರತಿ, ಅನಿಲ್, ಅನ್ವಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News