×
Ad

ಸಂಕಷ್ಟದಲ್ಲಿದ್ದ ಬುಡಕಟ್ಟು ಕುಟುಂಬಗಳು: ಅಗತ್ಯ ಸಾಮಗ್ರಿ ಹೊತ್ತು ನಡೆದ ಶಾಸಕ, ಜಿಲ್ಲಾಧಿಕಾರಿ

Update: 2020-03-30 20:32 IST

ತಿರುವನಂತಪುರಂ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಹಲವರು ಸಂಕಷ್ಟಕ್ಕೀಡಾಗಿರುವ ನಡುವೆಯೇ ಕೆಲವರ  ಮಾನವೀಯ ಸೇವೆಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇರಳದ ಪತನಂತಿಟ್ಟ ಎಂಬಲ್ಲಿನ ಬುಡಕಟ್ಟು ಸಮುದಾಯದ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಅಲ್ಲಿನ ಶಾಸಕ ಮತ್ತು ಜಿಲ್ಲಾಧಿಕಾರಿ ಹೊತ್ತು ಸಾಗುತ್ತಿರುವ ಫೋಟೊ ವೈರಲ್ ಆಗಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಸಿಪಿಎಂ ಶಾಸಕ ಜೆನಿಶ್ ಕುಮಾರ್ ಮತ್ತು ಜಿಲ್ಲಾ ಕಲೆಕ್ಟರ್ ಪಿಬಿ ನೂಹ್ ಅವರು ಅಗತ್ಯ ಸಾಮಗ್ರಿಗಳನ್ನು ಹೊತ್ತುಕೊಂಡು ತೊರೆಯೊಂದನ್ನು ದಾಟುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅರಣ್ಯ ಪ್ರದೇಶವಾಗಿರುವ ಇಲ್ಲಿ 37 ಬುಡಕಟ್ಟು ಸಮುದಾಯಕ್ಕೆ ಸೇರಿದ ಕುಟುಂಬಗಳಿದ್ದು, ಅಗತ್ಯ ಸಾಮಗ್ರಿಗಳಿಲ್ಲದೆ ಸಂಕಷ್ಟದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News