×
Ad

ಭಟ್ಕಳ : ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ

Update: 2020-03-30 21:35 IST

ಭಟ್ಕಳ : ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ನಡೆಸಲಾಗುವುದು ಎಂದು ಆರ್.ಎನ್.ಎಸ್. ಟ್ರಸ್ಟ್ ಅಧ್ಯಕ್ಷ ಡಾ. ಆರ್. ಎನ್. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜನರು ಕೊರೊನಾ ವೈರಸ್‍ನಿಂದ ಆಗಿರುವ ಲಾಕ್‍ಡೌನ್‍ನಿಂದಾಗಿ ತೀವ್ರ ತೊಂದರೆಯಲ್ಲಿರುವುದರಿಂದ ತಮ್ಮ ಮುರ್ಡೇಶ್ವರದ ಆರ್. ಎನ್. ಎಸ್. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಕೂಡಾ ಉಚಿತ ತಪಾಸಣೆಯನ್ನು ಮಾಡಲು ತೀರ್ಮಾನಿಸಿದ್ದು ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರೂ ಲಭ್ಯರಿರುತ್ತಾರೆ ಎಂದೂ ಅವರು ತಿಳಿಸಿದ್ದಾರೆ. 

ಭಟ್ಕಳದ ಜನತೆ ತಮ್ಮ ಆರೋಗ್ಯ ಸಮಸ್ಯೆಗಾಗಿ ಮುರ್ಡೇಶ್ವರದ ಆರ್. ಎನ್. ಎಸ್. ಆಸ್ಪತ್ರೆಗೆ ಬಂದು ತಪಾಸಣೆ, ಚಿಕಿತ್ಸೆ ಪಡೆಯಬಹುದು ಎಂದೂ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News