ಲಾಕ್ ಡೌನ್: ಹಸಿವಿನಿಂದ 8 ವರ್ಷದ ಬಾಲಕನ ಸಾವು

Update: 2020-03-30 16:17 GMT
ಸಾಂದರ್ಭಿಕ ಚಿತ್ರ

ಪಾಟ್ನಾ,ಮಾ.31: ಲಾಕ್‌ಡೌನ್‌ನಿಂದಾಗಿ ದುಡಿಮೆಯಿಲ್ಲದೆ, ವಲಸಿಗ ಕುಟುಂಬವೊಂದರ ಎಂಟು ವರ್ಷದ ಬಾಲಕನೊಬ್ಬ ಹಸಿವಿನಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.

 ಮೃತ ಬಾಲಕ ರಾಕೇಶ್ ಮುಸಾಹರ್ ಮೃತಟ್ಟ ಬಾಲಕ. ದಲಿತ ಮುಸಾಹರ್ ಕುಟುಂಬಕ್ಕೆ ಸೇರಿದ ಈತ ಚಿಂದಿ ಆಯುವ ಕೆಲಸ ನಡೆಸುತ್ತಿದ್ದನೆನ್ನಲಾಗಿದೆ. ಆತನ ತಂದೆ ದುರ್ಗಾಪ್ರಸಾದ್ ಮುಸಾಹರ್ ಹೊರೆ ಕಾರ್ಮಿಕರಗಿದ್ದರು.

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಿಸಿದ ಬಳಿಕ ತಂದೆ-ಮಗನಿಗೆ ಸಂಪಾದನೆಯಿರಲಿಲ್ಲ. ಇದರಿಂದಾಗಿ ಈ ಕುಟುಂಬ ಹಸಿವಿನಿಂದ ಕಂಗಾಲಾಗಿತ್ತೆನ್ನಲಾಗಿದೆ.

 ‘‘ಕರ್ಫ್ಯೂ ಆರಂಭಗೊಂಡ ಬಳಿಕ ಮನೆಯಲ್ಲಿ ಯಾವುದೇ ಅಡುಗೆಯನ್ನು ಮಾಡಿಲ್ಲ. ರಾಕೇಶ್ ಆಗಲೇ ಅಸ್ವಸ್ಥನಾಗಿದ್ದಾನೆ. ಕರ್ಫ್ಯೂ ಹೇರಿದ ದಿನದ ರಾತ್ರಿ ಸ್ವಲ್ಪ ರೋಟಿಯನ್ನು ಆತ ಸೇವಿಸಿದ್ದ. ಆನಂತರ ನಮ್ಮ ಮನೆಯಲ್ಲಿ ಆಹಾರವೇ ಉಳಿದಿರಲಿಲ್ಲ ’’

ಸೋನಾಮತಿ ದೇವಿ,

ಮೃತ ಬಾಲಕ ರಾಕೇಶ್ ಮುನಾಹರ್‌ನ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News