ತ.ನಾ.: ನಾಲ್ಕು ಮಂದಿಯ ಕಾರ್ಮಿಕ ಕುಟುಂಬ ಕಾಡ್ಗಿಚ್ಚಿಗೆ ಬಲಿ

Update: 2020-03-30 16:24 GMT
ಸಾಂದರ್ಭಿಕ ಚಿತ್ರ

ತಮಿಳುನಾಡಿ ತೇನಿ ಜಿಲ್ಲೆಯಲ್ಲಿ ಎಸ್ಟೇಟ್‌ನಲ್ಲಿ ದುಡಿಯುತ್ತಿದ್ದ ನಾಲ್ಕು ಮಂದಿಯ ಕುಟುಂಬವೊಂದು, ಅರಣ್ಯ ಮಾರ್ಗವಾಗಿ ತಮ್ಮ ಹಳ್ಳಿಗೆ ವಾಪಸಾಗುತ್ತಿದ್ದಾಗ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಈ ದಾರಿಯಲ್ಲಿ ಯಾವುದೇ ವಾಹನ ಸಂಚಾರವಿಲ್ಲದಿರುವುದರಿಂದ ಈ ಕುಟುಂಬವು ನಡೆದುಕೊಂಡು ಹಳ್ಳಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

   ಪಶ್ಚಿಮಬಂಗಾಳದ ಹೌರಾದಲ್ಲಿ ವಲಸಿಗ ಕಾರ್ಮಿಕನೊಬ್ಬ ಹಾಲು ಖರೀದಿಸಲು ಮನೆಯಿಂದ ಹೊರಬಂದಾಗ ಆತ ಪೊಲೀಸರಿಂದ ಥಳಿತಕ್ಕೊಳಗಾಗಿದ್ದ. ಹೃದ್ರೋಗಿಯಾಗಿದ್ದ ಆತ ಅಸ್ಪತ್ಪೆಯಲ್ಲಿ ಕೊನೆಯುಸಿರೆಳೆದಿದ್ದ. ಗುಜರಾತ್‌ನಲ್ಲಿಯೂ 62 ವರ್ಷದ ವಲಸಿಗ ಕಾರ್ಮಿಕನೊಬ್ಬ ವಾಹನ ಸಂಚಾರವಿಲ್ಲದ ಕಾರಣ, ಕಾಲ್ನಡಿಗೆಯಲ್ಲೇ ತನ್ನ ಹಳ್ಳಿಯತ್ತ ಪ್ರಯಾಣಿಸುತ್ತಿದ್ದಾಗ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾರೆ. ಆತ ಸುಮಾರು 8 ಕಿ.ಮೀ.ಗಳನ್ನು ನಡೆದುಕೊಂಡೇ ಕ್ರಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News