ಮುಚ್ಚಿದ ಹತ್ತಿಗಿರಣಿ: ಕೆಲಸ, ಊಟ ಇಲ್ಲದೆ ಸಂಕಷ್ಟದಲ್ಲಿ 6 ಲಕ್ಷ ಕಾರ್ಮಿಕರು

Update: 2020-03-30 16:45 GMT
ಫೈಲ್ ಚಿತ್ರ

ಮುಂಬೈ, ಮಾ.30: ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಮುಂಬೈಯ ಭಿವಂಡಿಯಲ್ಲಿರುವ ವಿದ್ಯುತ್ ಮಗ್ಗದ ಘಟಕಗಳು ಸ್ಥಗಿತಗೊಂಡಿರುವುದರಿಂದ ಅವುಗಳಲ್ಲಿ ದುಡಿಯುತ್ತಿರುವ ಸುಮಾರು ಆರು ಲಕ್ಷ ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದು, ಕೈಯಲ್ಲಿ ಹಣ ವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದಾರೆ.

 ಲಾಕ್‌ಡೌನ್‌ನಿಂದಾಗಿ ವ್ಯಾಪಾರ, ವಹಿವಾಟು ನಿಂತಿರುವುದರಿಂದ ಭಿವಂಡಿಯಲ್ಲಿ ಹೊಟೇ ಇಲ್ಲಿನಲ್‌ಗಳು ಕೂಡಾ ಮುಚ್ಚುಗಡೆಗೊಂಡಿವೆ. ಗಿರಣಿಗಳಲ್ಲಿ ದುಡಿಯುತ್ತಿರುವ ಇಲ್ಲಿನ ವಿದ್ಯುತ್ ಗಿರಣಿಗಳಲ್ಲಿ 6 ಲಕ್ಷ ಮಂದಿ ನೌಕರರು ಪ್ರತಿ ಹದಿನೈದು ದಿನಗಳಿಗೆ 4 ಸಾವಿರ ರೂ. ಸಂಪಾದಿಸುತ್ತಾರೆ. ಆದರೆ ಕಳೆದ ಹಲವು ದಿನಗಳಿಂದ ಈ ಪವರ್‌ಲೂಂಗಳು ಸ್ಥಗಿತಗೊಂಡಿರುವುದರಿಂದ ಅವರ ಪರಿಸ್ಥಿತಿಯೀಗ ಶೋಚನೀಯವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಾವು ಹಸಿವಿಗೆ ತುತ್ತಾಗಬಹುದೆಂದು ಈ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News