ಪೊಲೀಸರ ಜೊತೆ ಸಂಘರ್ಷ: 93 ವಲಸಿಗ ಕಾರ್ಮಿಕರ ಬಂಧನ

Update: 2020-03-30 17:04 GMT
ಫೈಲ್ ಚಿತ್ರ

ಹೊಸದಿಲ್ಲಿ, ಮಾ.19: ರಾಷ್ಟ್ರವ್ಯಾಪಿಯಾಗಿ ಹೇರಲಾಗಿರುವ ಲಾಕ್‌ಡೌನ್ ಅನ್ನು ಉಲ್ಲಂಘಿಸಿದ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿರೆನ್ನಲಾದ 93 ಮಂದಿ ವಲಸಿಗ ಕಾರ್ಮಿಕರನ್ನು ಗುಜರಾತ್‌ನ ಸೂರತ್‌ಲ್ಲಿ ಸೋಮವಾರ ಬಂಧಿಸಲಾಗಿದೆ.

ಸೂರತ್‌ನ ಗಣೇಶ್ ನಗರ ಹಾಗೂ ತಿರುಪತಿ ನಗರ ಪ್ರದೇಶಗಳಲ್ಲಿರುವ ಸುಮಾರು 500 ಮಂದಿಯಷ್ಟಿದ್ದ ವಲಸಿಗ ಕಾರ್ಮಿಕರ ಗುಂಪೊಂದು ರವಿವಾರ ರಾತ್ರಿ ರಸ್ತೆಗಿಳಿದು, ತಮ್ಮ ಊರುಗಳಿಗೆ ತೆರಳಲು ಬಸ್‌ಗಳ ಏರ್ಪಾಡು ಮಾಡುವಂತೆ ಆಗ್ರಹಿಸತೊಡಗಿದರು.

ಮನೆಗಳೊಳಗೆ ಉಳಿದುಕೊಳ್ಳುವಂತೆ ಪೊಲೀಸರು ಅವರ ಮನವೊಲಿಸಲು ಯತ್ನಿಸಿದರಾದರೂ ಅವರು ಭದ್ರತಾ ಸಿಬ್ಬಂದಿ ಮೇಲೆ ಕಲ್ಲೆಸೆಯ ತೊಡಗಿದರು. ಘಟನೆಯಲ್ಲಿ ಹಲವಾರು ಪೊಲೀಸ್ ವಾಹನಗಳು ಜಖಂಗೊಂಡಿವೆ.

ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್ ಪ್ರಯೋಇಸಿದರು. ಪ್ರಕರಣಕ್ಕೆ ಸಂಬಂಧಸಿ 500 ಮಂದಿಯ ತಂಡದ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರಲ್ಲಿ 93 ಮಂದಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News