ಸ್ಪೇನ್: ಮತ್ತೆ 812 ಸಾವು: ಕೊರೋನವೈರಸ್ ಸೋಂಕು ಪೀಡಿತರ ಸಂಖ್ಯೆ 85,195

Update: 2020-03-30 17:10 GMT

ಮ್ಯಾಡ್ರಿಡ್ (ಸ್ಪೇನ್), ಮಾ. 30: ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್‌ನಿಂದಾಗಿ 812 ಸಾವುಗಳು ಸಂಭವಿಸಿವೆ ಎಂದು ಸ್ಪೇನ್ ಸೋಮವಾರ ವರದಿ ಮಾಡಿದೆ. ಇದರೊಂದಿಗೆ ಆ ದೇಶದಲ್ಲಿ ನೋವೆಲ್-ಕೊರೋನವೈರಸ್ ಕಾಯಿಲೆಗೆ ಬಲಿಯಾದವರ ಸಂಖ್ಯೆ 7,340ಕ್ಕೆ ಏರಿದೆ.

ಇದು ಗುರುವಾರ ಬಳಿಕ ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ದಾಖಲಾಗಿರುವ ಸಾವುಗಳಲ್ಲಿ ಇದು ಮೊದಲ ಇಳಿಕೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಇಟಲಿ ಬಳಿಕ ಸ್ಪೇನ್ ಎರಡನೇ ಸ್ಥಾನದಲ್ಲಿದೆ.

ದೇಶದಲ್ಲಿ ಕೊರೋನವೈರಸ್ ಸೋಂಕು ಖಚಿತಗೊಂಡ ಪ್ರಕರಣಗಳ ಸಂಖ್ಯೆ ಈಗ 85,195 ಆಗಿದೆ.

ಸ್ಪೇನ್‌ನಲ್ಲಿ ಮಾರ್ಚ್ 14ರಿಂದ ದೇಶವ್ಯಾಪಿ ಬೀಗ ಹಾಕಲಾಗಿದೆ. ಈ ಅವಧಿಯಲ್ಲಿ ಜನರು ಕೆಲಸಕ್ಕೆ ಹೋಗಲು, ಆಹಾರ ಮತ್ತು ಔಷಧಿ ಖರೀದಿಸಲು ಅಥವಾ ಕಾಯಿಲೆಪೀಡಿತ ಸಂಬಂಧಿಯೊಬ್ಬರ ಆರೈಕೆಗೆ ಮಾತ್ರ ಮನೆಯಿಂದ ಹೊರಬರಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News