ಹೀರೊ ಗ್ರೂಪ್‌ನಿಂದ ಕೊರೋನ ವೈರಸ್ ವಿರುದ್ಧ ಹೋರಾಟಕ್ಕೆ 100 ಕೋ.ರೂ. ದೇಣಿಗೆ

Update: 2020-03-31 06:32 GMT

ಹೊಸದಿಲ್ಲಿ,ಮಾ.31: ಕೊರೋನ ವೈರಸ್ ಪಿಡುಗಿನ ವಿರುದ್ಧ ಹೋರಾಡಲು ಹೀರೊ ಮೊಟೊಕಾರ್ಪ್ ಸಹಿತ ಹೀರೊ ಗ್ರೂಪ್‌ನ ವಿವಿಧ ಕಂಪೆನಿಗಳು 100 ಕೋ.ರೂ. ನೀಡುವ ಭರವಸೆ ನೀಡಿವೆ.

   100 ಕೋ.ರೂ.ಗಳ ಪೈಕಿ 50 ಕೋ. ರೂಗಳನ್ನು ಪ್ರಧಾನಮಂತ್ರಿ ಕೇರ್ ಫಂಡ್ ಹಾಗೂ ಉಳಿದ 50 ಕೋ.ರೂ.ವನ್ನು ಇತರ ಪರಿಹಾರ ನಿಧಿಗಳಿಗೆ ವ್ಯಯಿಸಲು ನಿರ್ಧರಿಸಿವೆ.

 ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ಆ್ಯಂಬುಲೆನ್ಸ್‌ಗಳು,ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು, ಗ್ಲೌಸ್‌ಗಳು ಹಾಗೂ 100 ವೆಂಟಿಲೇಟರ್‌ಗಳನ್ನು ವಿತರಿಸುವುದು ಹಾಗೂ ಪ್ರತಿದಿನ 10,000 ಊಟಗಳನ್ನು ವಿತರಿಸಲು ನಿರ್ಧರಿಸಲಾಗಿದೆ.

"ಕೋವಿಡ್-19ರಿಂದ ನಮ್ಮ ದೇಶ ಹಾಗೂ ಇಡೀ ವಿಶ್ವ ಕಂಡುಕೇಳರಿಯದ ಸವಾಲು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗುವುದು,ಸಮಾಜದ ಬಡ ಕುಟುಂಬಕ್ಕೆ ನೆರವಾಗುವುದು ಮುಖ್ಯ. ಹೀರೋ ಕಂಪೆನಿಗಳ ಪರವಾಗಿ ಪಿಎಂ ಪರಿಹಾರನಿಧಿ ಹಾಗೂ ಇತರ ಪರಿಹಾರ ನಿಧಿಗಳಿಗೆ ಕೊಡುಗೆ ನೀಡಲು ನಾವು ಬಯಸಿದ್ದೇವೆ'' ಎಂದು ಹೀರೊ ಮೋಟೊಕಾರ್ಪ್‌ನ ಮುಖ್ಯಸ್ಥ ಡಾ.ಪವನ್ ಮುಂಜಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News