ಕೋವಿಡ್-19 ಸಹಾಯವಾಣಿಯಲ್ಲಿ ಸಮೋಸಕ್ಕಾಗಿ ಬೇಡಿಕೆ ಇಟ್ಟವನಿಗೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆ !

Update: 2020-03-31 08:28 GMT

ಲಕ್ನೋ, ಮಾ.31: ಕೊರೋನ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನು ಲಾಕ್‌ಡೌನ್ ಮಾಡಲಾಗಿದ್ದು, ಉತ್ತರಪ್ರದೇಶ ಸರಕಾರ ಔಷಧಿಗಳು ಹಾಗೂ ಇತರ ಅವಶ್ಯಕ ವಸ್ತುಗಳ ಪೂರೈಕೆ ಸಹಾಯಕ್ಕಾಗಿ ಸಹಾಯವಾಣಿಯನ್ನು ಆರಂಭಿಸಿತ್ತು. ಓರ್ವ ವ್ಯಕ್ತಿ ಸಹಾಯವಾಣಿಗೆ ಪದೇ ಪದೇ ಫೋನ್ ಕರೆ ಮಾಡುತ್ತಾ ಸಮೋಸ ನೀಡುವಂತೆ ಪೀಡಿಸುತ್ತಿದ್ದ. ಅಧಿಕಾರಿಗಳು ಫೋನ್ ಮಾಡುತ್ತಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಿದರೂ ಜಗ್ಗದ ವ್ಯಕ್ತಿಗೆ ಸಮೋಸ ಪೂರೈಸುವ ಜೊತೆಗೆ ಚರಂಡಿಯನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡಿತು.

ನಾವು ಫೋನ್ ಮಾಡಿದ ವ್ಯಕ್ತಿಗೆ ಎಚ್ಚರಿಕೆ ನೀಡಿದ ಬಳಿಕ ಸಮೋಸ ನೀಡಿದೆವು. ಅನಗತ್ಯ ಬೇಡಿಕೆ ಇಟ್ಟು ನಿಯಂತ್ರಣ ಕೊಠಡಿಗೆ ತೊಂದರೆ ನೀಡಿದ ವ್ಯಕ್ತಿಗೆೆ ಪಾಠ ಕಲಿಸುವ ಉದ್ದೇಶದಿಂದ ಆತನ ಕೈಯಿಂದಲೇ ಚರಂಡಿಯನ್ನು ಸ್ವಚ್ಛಗೊಳಿಸಿದ್ದೇವೆ ಎಂದು ರಾಮಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News