ಸುಳ್ಯ ನಿವಾಸಿಗೆ ಕೊರೋನ ಸೋಂಕು ದೃಢ

Update: 2020-03-31 13:45 GMT

ಸುಳ್ಯ: ದುಬೈಯಿಂದ ವಾಪಸ್ಸಾಗಿದ್ದ ಸುಳ್ಯ ನಿವಾಸಿಯೋರ್ವರಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಅಜ್ಜಾವರ ಗ್ರಾಮದ ಒಬ್ಬರನ್ನು ಐಸೋಲೇಶನ್ ವಾರ್ಡ್ ನಲ್ಲಿಟ್ಟು, ಅವರ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದೀಗ ಪರೀಕ್ಷೆಯ ಫಲಿತಾಂಶ ಬಂದಿದ್ದು, ಆ ವ್ಯಕ್ತಿಗೆ ಕೊರೋನ ಸೋಂಕು ಇರುವುದು ದೃಢವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News