ಮದ್ಯವ್ಯಸನಿಗಳ ಬೇಡಿಕೆ ಈಡೇರಿಸುವುದು ಅಸಾಧ್ಯ: ಸಚಿವ ಕೋಟ

Update: 2020-03-31 14:44 GMT

ಉಡುಪಿ, ಮಾ.31: ಮದ್ಯ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮದ್ಯ ವ್ಯವನಿಗಳ ಬೇಡಿಕೆ ಈಡೇರಿಸುವುದು ಇಂದಿನ ಪರಿಸ್ಥಿತಿ ಯಲ್ಲಿ ಅಸಾಧ್ಯ ವಾಗಿದೆ. ಆದರೆ ಅವರ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಯನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಮಾಲೋಚನೆ ಮಾಡಬಹುದಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಉಡುಪಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ದ.ಕ. ಹಾಗೂ ಕೇರಳ ಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರನ್ನು ಬಂದ್ ಮಾಡಿರುವುದರ ವಿರುದ್ಧ ಕಾಸರಗೋಡು ಸಂಸದರು ಸುಪ್ರೀಂ ಕೋರ್ಟಿನ ಮೊರೆ ಹೋಗಿ ದ್ದಾರೆ. ಅವರ ವಾದಕ್ಕೆ ಪ್ರತಿವಾದ ವನ್ನು ನಮ್ಮ ಅಧಿಕಾರಿಗಳು ದಾಖಲೆಗಳೊಂದಿಗೆ ಕೋರ್ಟಿಗೆ ಸಲ್ಲಿಸಲಿದ್ದಾರೆ. ಕಾಸರಗೋಡಿನಲ್ಲಿ ಸೋಂಕಿ ತರ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಕೊರೋನ ನಿಯಂತ್ರಣ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ನಿರಂತರ ಮೂರು ದಿನಗಳ ಕಾಲ ಹಾಲು ಔಷಧ ಬಿಟ್ಟು ಯಾವುದೇ ಅಗತ್ಯ ವಸ್ತುಗಳು ದೊರೆಯುತ್ತಿರಲಿಲ್ಲ. ಇಂದು ಬೆಳಗ್ಗೆ 6ಗಂಟೆ ಯಿಂದ ಅಪರಾಹ್ನ 3ಗಂಟೆಯವರೆಗೆ ದಿನಸಿ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟ ಪರಿಣಾಮ ಜನ ಒಮ್ಮೇಲೆ ಸೇರಿ ಒತ್ತಡ ಜಾಸ್ತಿಯಾ ಗಿದೆ. ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಜನರಿಗೆ ತೊಂದರೆ ಆಗದಂತೆ ಈ ಸಮಯವನ್ನು ಮುಂದುವರೆಸುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುುದು ಎಂದು ಸಚಿವರು ಹೇಳಿದರು.

ದೇವಳಗಳಿಂದ ಊಟದ ವ್ಯವಸ್ಥೆ

ರಾಜ್ಯದಲ್ಲಿರುವ 210 ದೇವಸ್ಥಾನಗಳಲ್ಲಿ ಲಾಕ್‌ಡೌನ್‌ನಿಂದ ಸಮಸ್ಯೆಯಲ್ಲಿ ರುವವರಿಗೆ ಊಟದ ವ್ಯವಸ್ಥೆ ಕಲ್ಪಿಸುವಂತೆ ಆದೇಶ ಹೊರಡಿಸ ಲಾಗಿದೆ. ಈಗಾಗಲೇ ಅಂಬಲಪಾಡಿ, ಮಂದಾರ್ತಿ, ಕೊಲ್ಲೂರು, ಕಟೀಲು, ಕದ್ರಿ ಸೇರಿ ದಂತೆ ವಿವಿಧ ದೇವಸ್ಥಾನಗಳಿಂದ ವಲಸೆ ಕಾರ್ಮಿಕರು ಸೇರಿದಂತೆ ಅಗತ್ಯ ಇರುವವರಿಗೆ ಉಚಿತ ಊಟ ನೀಡಲು ಬೆೀಕಾದ ಸಿದ್ಧತೆಯನ್ನು ಮಾಡ ಲಾಗಿದೆ.

ದೇವಸ್ಥಾನದಿಂದ ಉಚಿತ ಊಟ ಒದಗಿಸಲು ಸರಕಾರ ಬದ್ಧವಾಗಿದೆ. ಕೆಲವು ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್ ತೆರೆದು ಊಟ ನೀಡಲಾಗುತ್ತಿದೆ ಎಂದು ಸಚಿವ ಕೋಟ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News