ಕೊರೋನ ವೈರಸ್: ಪಿಎಂ ಕೇರ್ಸ್ ನಿಧಿಗೆ 25,000 ರೂ. ನೀಡಿದ ಪ್ರಧಾನಿ ಮೋದಿ ತಾಯಿ

Update: 2020-03-31 17:33 GMT

ಹೊಸದಿಲ್ಲಿ: ಕೊರೋನ ವೈರಸ್ ನಿಯಂತ್ರಣಕ್ಕಾಗಿ ಆರಂಭಿಸಲಾದ ಪಿಎಂ ಕೇರ್ಸ್ ನಿಧಿಗೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ 25 ಸಾವಿರ ರೂ. ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಹೀರಾಬೆನ್ ಸದ್ಯ ಗುಜರಾತ್ ನ ಗಾಂಧಿನಗರದಲ್ಲಿ ತಮ್ಮ ಕಿರಿಯ ಪುತ್ರ ಪಂಕಜ್ ಮೋದಿಯವರೊಂದಿಗೆ ವಾಸಿಸುತ್ತಿದ್ದಾರೆ.

ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಗೌರವಾರ್ಥ ಚಪ್ಪಾಳೆ ತಟ್ಟಬೇಕೆಂದು ಪ್ರಧಾನಿ ನೀಡಿದ್ದ ಕರೆಯ ಹಿನ್ನೆಲೆಯಲ್ಲಿ ಹೀರಾ ಬೆನ್ ತಟ್ಟೆಯನ್ನು ಬಾರಿಸುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News