ಸೂಕ್ತ ಚಿಕಿತ್ಸೆ ಲಭಿಸದ ಆರೋಪ: ಇಬ್ಬರು ಮೃತ್ಯು

Update: 2020-03-31 18:20 GMT

ಮಂಜೇಶ್ವರ, ಮಾ.31: ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಕೇರಳದ ರೋಗಿಗಳ ಪ್ರವೇಶವನ್ನು ತಡೆಗಟ್ಟಿರುವ ದ.ಕ. ಜಿಲ್ಲಾಡಳಿತದ ಕ್ರಮ ಈ ಪ್ರದೇಶದಿಂದ ಮಂಗಳೂರಿನ ಆಸ್ಪತ್ರೆಯನ್ನೇ ಆಶ್ರಯಿಸಿರುವ ರೋಗಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಮೂಲತಃ ಮಂಜೇಶ್ವರ ಗುಡ್ದಕ್ಕೇರಿ ನಿವಾಸಿ ಸದ್ಯ ತಲಪಾಡಿಯಲ್ಲಿ ವಾಸವಿದ್ದ ಶೇಖರ (49)ರನ್ನು ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದಾಗ ಗಡಿ ಪ್ರದೇಶದಲ್ಲಿ ಕರ್ನಾಟಕ ಪೊಲೀಸರು ತಡೆದರೆನ್ನಲಾಗಿದೆ. ಬಳಿಕ ಅವರು ಕೊನೆಯುಸಿರೆಳೆದಿದ್ದು, ಮಂಗಳೂರು ಆಸ್ಪತ್ರೆಗೆ ತಲುಪಲಾಗದಿರುವುದರಿಂದ ಸೂಕ್ತ ಚಿಕಿತ್ಸೆ ಲಭಿಸದೆ ಈ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

ಅದೇರೀತಿ ತೂಮಿನಾಡು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪತ್ನಿ ಬೇಬಿ (59) ಇಂದು ಮೃತಪಟ್ಟಿದ್ದಾರೆ.

ರಕ್ತದೊತ್ತಡ ಸಮಸ್ಯೆ ತೀವ್ರಗೊಂಡ ಇವರನ್ನು ಕುಂಬಳೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಇಲ್ಲವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯಲು ಸಾಧ್ಯವಾಗದೆ ಸಾವನ್ನಪ್ಪಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News