ಕೊರೋನ ವೈರಸ್ ಭೀತಿ : ಜಿ.ಶಂಕರ್ 50 ಲಕ್ಷ ರೂ., ನೆರವು

Update: 2020-03-31 18:26 GMT

ಉಡುಪಿ : ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ.ಶಂಕರ್ ಜಿಲ್ಲೆಯ ಜನತೆಗೆ 50 ಲಕ್ಷ ರೂ., ಮೌಲ್ಯದ ವೈದ್ಯಕೀಯ ಸಾಮಗ್ರಿ, ವಲಸೆ, ಕೂಲಿ ಕಾರ್ಮಿಕರಿಗೆ ದಿನ ಬಳಕೆ ಸಾಮಗ್ರಿಗಳ ನೆರವು ನೀಡಿದ್ದಾರೆ.

ಜಿಲ್ಲಾಡಳಿತದ ಮನವಿಯ ಮೇರೆಗೆ ತುರ್ತು ವೈದ್ಯಕೀಯ ಸಾಮಗ್ರಿಗಳಾದ 2500 ಎನ್ -95 ಮಾಸ್ಕ್, 1 ಲಕ್ಷ ಫೇಸ್ ಮಾಸ್ಕ್,  ಐಶೀಲ್ಡ್, ಕನ್ನಡಕ ಮತ್ತು ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ಸ್ಟರಲೈಜ್ಡ್ ಗ್ಲೌಸ್ ಸೇರಿದಂತೆ ಇತರೆ ವೈದ್ಯಕೀಯ ರಕ್ಷಣಾ ಸಲಕರಣೆ ಸಹಿತ ವಿವಿಧ ಸಾಮಗ್ರಿಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದ್ದು, ಅವುಗಳನ್ನು ವೈದ್ಯರು, ದಾದಿಯರು, ಆಸ್ಪತ್ರೆಯ ಸಿಬ್ಬಂದಿಗೆ ನೀಡಲಾಗುತ್ತದೆ. ಕರೋನ ವಿರುದ್ಧ ನಿರಂತರ ಹೋರಾಡುತ್ತಿರುವ ಪೊಲೀಸ್ ಇಲಾಖೆ ಮತ್ತು ಆಶಾ ಕಾರ್ಯಕರ್ತರಿಗೂ ಇದರಲ್ಲಿ ಮಾಸ್ಕ್‌ಗಳನ್ನು ವಿತರಿಸಲಾಗುತ್ತದೆ.

ಲಾಕ್‌ಡೌನ್‌ನಿಂದಾಗಿ ಜೀವನ ನಿರ್ವಹಿಸಲು ಕಷ್ಟ ಪಡುತ್ತಿರುವ 1500 ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ನಿತ್ಯದ ಜೀವನಕ್ಕೆ ಬೇಕಾಗಿ ರುವ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ದವಸ, ದಾನ್ಯಗಳನ್ನೊಳಗೊಂಡ ಆಹಾರ ಸಾಮಗ್ರಿಗಳ ಪ್ಯಾಕೆಟ್ ಬಡ ಕುಟುಂಬಗಳಿಗೆ ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News