ನಿಝಾಮುದ್ದೀನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ: ಅಶ್ರಫ್ ಅಗ್ನಾಡಿ
Update: 2020-04-01 18:08 IST
ಉಪ್ಪಿನಂಗಡಿ, ಎ.1: ತಬ್ಲೀಗಿ ಎ- ಜಮಾತ್ ವತಿಯಿಂದ ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ಕಳೆದ ತಿಂಗಳು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ತಾನು ಪಾಲ್ಗೊಂಡಿಲ್ಲ. ಆದರೂ ಕೆಲವು ಮಾಧ್ಯಮಗಳಲ್ಲಿ ಉಪ್ಪಿನಂಗಡಿಯ ನ್ಯಾಯವಾದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿವೆ ಮತ್ತು ವೈಯುಕ್ತಿಕವಾಗಿ ತನ್ನ ತೇಜೋವಧೆ ಮಾಡಿದೆ ಎಂದು ಪಿಎಫ್‌ಐ ಮುಖಂಡ, ನ್ಯಾಯವಾದಿ ಅಶ್ರಫ್ ಅಗ್ನಾಡಿ ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಾನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾ.16ರಂದು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೆ. 20ಕ್ಕೆ ಮರಳಿದ್ದೆ. ಮರ್ಕಝ್ ಕಾರ್ಯಕ್ರಮದಲ್ಲಿ ತಾನು ಪಾಲ್ಗೊಂಡಿಲ್ಲ. ಆದರೂ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬುತ್ತಿದೆ. ಮಾಧ್ಯಮಗಳ ಈ ನಡೆ ಖಂಡನೀಯ ಎಂದು ಅಶ್ರಫ್ ಅಗ್ನಾಡಿ ತಿಳಿಸಿದ್ದಾರೆ.