ಕೊರೋನ ವೈರಸ್ ಹಿನ್ನೆಲೆ: ದ.ಕ.ಜಿಲ್ಲಾಡಳಿತದಿಂದ 'ಫ್ಲೈಯಿಂಗ್ ಸ್ಕ್ವಾಡ್' ರಚನೆ

Update: 2020-04-01 13:48 GMT

ಮಂಗಳೂರು, ಎ.1: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಾಲಕಾಲಕ್ಕೆ ಹೊರಡಿಸಲಾಗುವ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಜಿಲ್ಲಾಧಿಕಾರಿ‘ಫ್ಲೈಯಿಂಗ್ ಸ್ಕ್ವಾಡ್’ ರಚಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ, ಮನಪಾ ಹೊರತಾದ ಮಂಗಳೂರು ತಾಲೂಕು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡುಬಿದಿರೆ ತಾಲೂಕು ಮತ್ತು ಮುಲ್ಕಿ ಹಾಗೂ ಸುರತ್ಕಲ್ ಹೋಬಳಿ ಮಟ್ಟದಲ್ಲಿ ವಿವಿಧ ಅಧಿಕಾರಿಗಳನ್ನು ಒಳಗೊಂಡ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ.

ದಿನಸಿ ಅಂಗಡಿಗಳ ಮುಂದೆ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಗುರುತಿಸುವುದು, ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದರೂ ಕೂಡ ಪ್ರತೀ ಗಂಟೆಗೊಮ್ಮೆ ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲಿಸುವುದು, ಅವಧಿ ಮೀರಿ ಅಂಗಡಿಗಳು ತೆರೆಯದಂತೆ ನೋಡಿಕೊಳ್ಳುವುದು, ಪ್ರತಿಯೊಬ್ಬ ಗ್ರಾಹಕನ ಮಧ್ಯೆ 5 ಅಡಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು, ಅಂಗಡಿ ಮಾಲಕರು ಜಿಲ್ಲಾಡಳಿತ ಸೂಚನೆಯನ್ನು ಉಲ್ಲಂಘಿಸುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ಪರಿಶೀಲಿಸುವುದು ಇತ್ಯಾದಿ ಈ ಸ್ಕ್ವಾಡ್‌ನ ಜವಾಬ್ದಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News