ಭಾರತೀಯ ಮೂಲದ ವೈರಾಲಜಿ ತಜ್ಞೆ ದಕ್ಷಿಣ ಆಫ್ರಿಕಾದಲ್ಲಿ ಕೊರೋನಗೆ ಬಲಿ

Update: 2020-04-01 13:56 GMT

ಜೊಹಾನ್ಸ್‍ ಬರ್ಗ್: ಭಾರತ ಮೂಲದ ವೈರಾಲಜಿ ತಜ್ಞೆ ಗೀತಾ ರಾಮ್‍ ಜಿ ಕೊರೋನ ವೈರಸ್ ಸೋಂಕಿಗೆ ದಕ್ಷಿಣ ಆಫ್ರಿಕಾದಲ್ಲಿ ಬಲಿಯಾಗಿದ್ದಾರೆ. ದೇಶದಲ್ಲಿ ಕೊರೋನ ಸೋಂಕಿನಿಂದ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.

ಲಸಿಕೆ ವಿಜ್ಞಾನಿ ಹಾಗೂ ಎಚ್‍ಐವಿ ತಡೆ ಸಂಶೋಧನಾ ಮಖ್ಯಸ್ಥರಾಗಿದ್ದ ರಾಮ್‍ ಜಿ ಒಂದು ವಾರದ ಹಿಂದೆ ಲಂಡನ್‍ ನಿಂದ ವಾಪಸ್ಸಾಗಿದ್ದರು. ಬಳಿಕ ಅವರಿಗೆ ಕೋವಿಡ್-19 ರೋಗ ಲಕ್ಷಣ ಕಾಣಿಸಿಕೊಂಡಿತ್ತು.

ಗೀತಾ ರಾಮ್‍ ಜಿ (64) ಅವರು ಡರ್ಬಾನ್‍ ನಲ್ಲಿರುವ ದಕ್ಷಿಣಆಫ್ರಿಕಾ ವೈದ್ಯಕೀಯ ಸಂಶೋಧನಾ ಮಂಡಳಿಯ ಕ್ಲಿನಿಕಲ್‍ ಟ್ರಯಲ್ಸ್‍ ಘಟಕದ ಪ್ರಧಾನ ಸಂಶೋಧಕರಾಗಿದ್ದರು ಮತ್ತು ಎಚ್‍ಐವಿ ತಡೆ ಸಂಶೋಧನಾ ಘಟಕದ ನಿರ್ದೇಶಕರಾಗಿದ್ದರು. ಎಸ್‍ಎಎಂಆರ್‍ಸಿ ಅಧ್ಯಕ್ಷೆ ಮತ್ತು ಸಿಇಒ ಗ್ಲೆಂಡಾಗ್ರೇ ಅವರು ಗೀತಾ ನಿಧನಕ್ಕೆತೀವ್ರ ಸಂತಾಪ ಸೂಚಿಸಿದ್ದಾರೆ.

2018ರಲ್ಲಿ ಗೀತಾರಾಮ್‍ ಜಿಯವರಿಗೆಅತ್ಯುತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿಯನ್ನು ಯೂರೋಪಿಯನ್‍ ಅಭಿವೃದ್ಧಿ ಕ್ಲಿನಿಕಲ್‍ ಟ್ರಯಲ್ಸ್ ಪಾರ್ಟರ್‍ಶಿಪ್ ಸಂಘಟನೆ ಘೋಷಿಸಿತ್ತು. ಎಚ್‍ಐವಿ ತಡೆಯ ಹೊಸ ವಿಧಾನಗಳ ಸಂಶೋಧನೆ ಬಗೆಗಿನ ಬದ್ಧತೆಗಾಗಿ ಈ ಗೌರವ ಸಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News