ಭಟ್ಕಳ: ಕೊರೋನ ಸೋಂಕಿತ ವಾಸಿಸುತ್ತಿದ್ದ ಕಾಂಪ್ಲೆಕ್ಸ್ ನಲ್ಲಿ ಆಂತಕದ ಛಾಯೆ

Update: 2020-04-01 15:19 GMT

ಭಟ್ಕಳ: ಮಾ.20 ರಂದು ದುಬೈನಿಂದ ಗೋವಾ ಮೂಲಕ ಭಟ್ಕಳಕ್ಕೆ ಬಂದಿದ್ದ 28 ವರ್ಷದ ಯುವಕನಲ್ಲಿ ಮಂಗಳವಾರ ಕೊರೋನ ಸೋಂಕು ದೃಢಪಟ್ಟಿದ್ದು, ಯುವಕ ವಾಸಿಸುತ್ತಿದ್ದ ಎನ್ನಲಾಗಿರುವ ಕಾಂಪ್ಲೆಕ್ಸ್ ನಲ್ಲಿ ಈಗ ಆತಂಕದ ಛಾಯೆ ಮನೆಮಾಡಿಕೊಂಡಿದೆ. ಕಾಂಪ್ಲೆಕ್ಸ್ ನಲ್ಲಿ 9 ಕುಟುಂಬಗಳು ವಾಸಿಸುತ್ತಿದ್ದು, ಈಗ ಆ ಒಂಬತ್ತು ಮನೆಗಳಿಗೆ ಪೌರಕಾರ್ಮಿಕರು ಸೋಂಕು ನಿಯಂತ್ರಣಕ್ಕೆ ಔಷಧಿಯನ್ನು ಸಿಂಪಡಿಸುತ್ತಿದ್ದಾರೆ. 

ಸೋಂಕಿತನ ಸಹೋದರ ಕೂಡಾ ದುಬೈನಲ್ಲಿದ್ದು, ಇಬ್ಬರು ಒಟ್ಟಿಗೆ ವಿಮಾನದಲ್ಲಿ ಬಂದಿದ್ದರು.

ದುಬೈನಿಂದ ಬಂದ ನಂತರ ಇಬ್ಬರಲ್ಲಿ ಓರ್ವನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ. ನಾಲ್ಕು ದಿನದ ಹಿಂದೆ ಆತನಿಗೆ ಸೋಂಕು ಇರುವುದು ದೃಢಪಟ್ಟಿತ್ತು, ಮಂಗಳವಾರ ಮತ್ತೋರ್ವನಿಗೂ ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತ ಯುವಕನ ಮಂಗಳವಾರದವರೆಗೂ ಮನೆಯಲ್ಲಿಯೇ ವಾಸಿಸುತ್ತಿದ್ದ. ಕಾಂಪ್ಲೆಕ್ಸ್ ನಲ್ಲಿ 9 ಮನೆ ಇದ್ದು, ನಿನ್ನೆ ದೃಢಪಟ್ಟ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಇದ್ದ ತನ್ನ ಸಹೋದರನಿಗೆ ಊಟ ಕೊಡಲು ಪ್ರತಿನಿತ್ಯ ಹೋಗಿ ಬರುತ್ತಿದ್ದ ಎನ್ನಲಾಗಿದೆ. ಇದೀಗ ಆತನಿಗೂ ಕೊರೋನ ಸೋಂಕು ಇರುವುದು ದೃಢಪಟ್ಟಿರುವುದರಿಂದ ಕಾಂಪ್ಲೆಕ್ಸ್ ನಲ್ಲಿದ್ದ ಇತರರಿಗೆ ಆತಂಕ ಎದುರಾಗಿದೆ.

ಇಂದು ಬೆಳಿಗ್ಗೆಯಿಂದ ಪೌರ ಕಾರ್ಮಿಕರು ಇಡೀ ಕಾಂಪ್ಲೆಕ್ಸ್ ನಲ್ಲಿ, ಮನೆಗಳ ಒಳಗೆ ಜೊತೆಗೆ ಸೋಂಕಿತ ಬಳಸುತ್ತಿದ್ದ ಬೈಕ್ ಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News