ಉಜ್ವಲ ಅನಿಲ ಯೋಜನೆ ಫಲಾನುಭವಿಗಳಿಗೆ ಎ.2ರಿಂದ ಮೂರು ತಿಂಗಳು ಉಚಿತ ಗ್ಯಾಸ್

Update: 2020-04-01 15:34 GMT

ಉಡುಪಿ, ಎ.1: ನೋವೆಲ್ ಕೊರೋನ ವೈರಸ್ ಸಮಸ್ಯೆ ದೇಶಾದ್ಯಂತ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಉಜ್ವಲ ಅನಿಲ ಯೋಜನೆ ಫಲಾನುಭವಿಗಳಿಗೆ ಎ.2ರಿಂದ ಪ್ರತಿ ತಿಂಗಳಿಗೆ ಒಂದು ಉಚಿತ ಗ್ಯಾಸ್ ಸಿಲಿಂಡರ್ ಮುಂದಿನ ಮೂರು ತಿಂಗಳು ದೊರೆಯಲಿದೆ ಎಂದು ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ರೋಹಿತ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 28,000 ಜನರಿಗೆ ಈ ಸೌಲಭ್ಯ ದೊರೆಯಲಿದೆ. ಉಜ್ವಲ ಗ್ಯಾಸ್ ಫಲಾನುಭವಿಗಳ ಖಾತೆಗೆ ನಾಳೆ ಒಂದು ಸಿಲಿಂಡರ್‌ನ ಹಣ ಜಮೆ ಆಗಲಿದೆ. ಈ ಹಣವನ್ನು ವಿತರಕರಿಗೆ ನೀಡಿ ಸಿಲಿಂಡರ್ ಪಡೆಯಬಹುದು.

ಉಡುಪಿ ಜಿಲ್ಲೆಯಲ್ಲಿ 28,000 ಜನರಿಗೆ ಈ ಸೌಲ್ಯದೊರೆಯಲಿದೆ.ಉಜ್ವಲ ಗ್ಯಾಸ್‌ ಫಲಾನುವಿಗಳ ಖಾತೆಗೆ ನಾಳೆ ಒಂದು ಸಿಲಿಂಡರ್‌ನ ಹಣ ಜಮೆ ಆಗಲಿದೆ. ಈ ಹಣವನ್ನು ವಿತರಕರಿಗೆ ನೀಡಿ ಗ್ಯಾಸ್ ಸಿಲಿಂಡರ್ ಪಡೆಯ ಬಹುದು. ಈ ಉಚಿತ ಗ್ಯಾಸ್ ಯೋಜನೆ ಜೂನ್‌ರವರೆಗೆ ಚಾಲ್ತಿಯಲ್ಲಿರುತ್ತದೆ. ಒಂದು ತಿಂಗಳು ಹಣ ಬಳಕೆ ಮಾಡದಿದ್ದರೆ ಮುಂದಿನ ತಿಂಗಳು ಹಣ ಜಮೆ ಆಗುವುದಿಲ್ಲ. ಎರಡು ಸಿಲಿಂಡರ್ ಬುಕ್ಕಿಂಗ್ ಮಧ್ಯೆ ಕನಿಷ್ಠ ಹದಿನೈದು ದಿನಗಳ ಅಂತರವಿರಬೇಕು ಎಂದು ರೋಹಿತ್ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ರೋಹಿತ್ ಇವರನ್ನು (ಮೊಬೈಲ್:9448402109) ಸಂಪರ್ಕಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News