​'ಟೀಂ ಬಿ ಹ್ಯೂಮನ್' ಮತ್ತು ಎನ್‌ಎಂಸಿ ಮೈದಾನ್ ಗೆಳೆಯರ ಬಳಗದಿಂದ ಆಹಾರ ಪೂರೈಕೆ

Update: 2020-04-01 15:54 GMT

ಮಂಗಳೂರು, ಎ.1: ಕೊರೋನ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್ ಸಂದರ್ಭ ಸಂಕಷ್ಟಕ್ಕೀಡಾದ ವಲಸೆ ಕಾರ್ಮಿಕರು ಮತ್ತು ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ 'ಟೀಂ ಬಿ ಹ್ಯೂಮನ್' ಮತ್ತು ಎನ್‌ಎಂಸಿ ಮೈದಾನ ಗೆಳೆಯರ ಬಳಗವು ಆಹಾರ ಪೂರೈಕೆ ಸೇವೆಯನ್ನು ಮುಂದುವರಿಸಿದೆ.

ಈ ಮಧ್ಯೆ ಕರ್ತವ್ಯ ನಿರತ ಪೊಲೀಸರಿಗೆ ಕೂಡ ಈ ತಂಡ ಕಳೆದೆರಡು ದಿನಗಳಿಂದ ಉಪಹಾರ ವಿತರಿಸಿದೆ. ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಶಹನವಾಝ್ ಹುಸೈನ್‌ರ ಕರೆಗೆ ಸ್ಪಂದಿಸಿದ ಬಳಗವು ಬಂದರ್ ದಕ್ಕೆಯಲ್ಲಿದ್ದ ಬಿಹಾರದ 25ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಆಹಾರ ಪೂರೈಸಿದೆ. ಅಲ್ಲದೆ ಬುಧವಾರದಿಂದ ಸ್ವತಃ ಅಡುಗೆ ತಯಾರಿಸಲು ಸಾಮಗ್ರಿಯನ್ನು ವಿತರಿಸಿದೆ.

ಲಾಕ್‌ಡೌನ್ ಆದ ದಿನದಿಂದಲೇ ತಂಡದ ಯುವಕರು ಸ್ವತಃ ಅಡುಗೆ ತಯಾರಿಸಿ ನಗರದ ಹಲವೆಡೆ ಹಸಿವಿನಲ್ಲಿದ್ದವರಿಗೆ ನೆರವಾಗಿದೆ. ಊರಿಗೆ ಹೋಗಲಾಗದ ಕೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಭಿಕ್ಷುಕರಿಗೂ ಸೇವೆ ನೀಡಲಾಗಿದೆ ಎಂದು 'ಟೀಂ ಬಿ ಹ್ಯೂಮನ್‌'ನ ಆಸೀಫ್ ಡೀಲ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News