ವಿವಿಧ ಸಂಘಟನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸಲು ಪಾಸ್ ಹಂಚಿಕೆ

Update: 2020-04-01 15:59 GMT

ಮಂಗಳೂರು, ಎ.1: ಕಳೆದ 10-12 ದಿನದಿಂದ ನಗರ ಮತ್ತು ಹೊರವಲಯದ ನಿರ್ಗತಿಕರಿಗೆ, ವಲಸೆ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಭಿಕ್ಷುಕರಿಗೆ ಆಹಾರ ವಿತರಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿರುವ ವಿವಿಧ ಸಮಾಜಮುಖಿ ಸಂಘಟನೆಗಳಿಗೆ ಜಿಲ್ಲಾಡಳಿತವು ಆಹಾರ ವಿತರಣೆಗೆ ನಿರ್ಬಂಧ ವಿಧಿಸಿ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ‘ಎ’ ದರ್ಜೆಯ ದೇವಸ್ಥಾನಗಳ ಮೂಲಕ ಆಹಾರ ವಿತರಣೆಗೆ ಕ್ರಮ ಜರುಗಿಸಿದ್ದರೂ ಕೂಡ ಇದೀಗ ಆಹಾರ ಸಾಮಗ್ರಿಯ ಕಿಟ್ ವಿತರಿಸಲು ಪಾಸ್ ಹಂಚಿಕೆ ಮಾಡಿದೆ.

ನಗರದಲ್ಲಿ ವಿವಿಧ ಸಂಘಟನೆಗಳು ಹಸಿದ ಹೊಟ್ಟೆಯನ್ನು ತಣಿಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದಲೇ ಮಾಡುತ್ತಿತ್ತು. ಬೇರೆ ಬೇರೆ ಕಾರಣಕ್ಕೆ ಇದಕ್ಕೆ ನಿರ್ಬಂಧ ಹೇರಿದರೂ ಕೂಡ ಶಾಸಕ ವೇದವ್ಯಾಸ ಕಾಮತ್‌ರ ಸಮ್ಮುಖದಲ್ಲಿ ಮುಸ್ಲಿಂ ಸಂಘಟನೆಗಳ ಮುಖಂಡರು ಚರ್ಚೆ ನಡೆಸಿ ಅರ್ಹರಿಗೆ ಜಾತಿ, ಮತಭೇದವಿಲ್ಲದೆ ಆಹಾರ ಸಾಮಗ್ರಿಯ ಕಿಟ್ ವಿತರಿಸಲು ಅವಕಾಶ ಕೋರಿದ್ದರು. ಅದಕ್ಕೆ ಸ್ಪಂದಿಸಿರುವ ಕಾಮತ್ ಸುಮಾರು 28 ಮುಸ್ಲಿಂ ಸಂಘಟನೆಗಳಿಗೆ ಪಾಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಪ್ರತಿಯೊಂದು ಸಂಘಟನೆಗೂ ಒಂದೊಂದು ವಾಹನಕ್ಕೆ ಪಾಸ್ ನೀಡಿದೆ. ಮತ್ತು ಪ್ರತೀ ವಾಹನದಲ್ಲಿ ಮೂವರು ತೆರಳಲು ಅನುಮತಿ ನೀಡಿವೆ.

ಅದರಂತೆ ವಿವಿಧ ಸಂಘಟನೆಗಳು ಜಿಲ್ಲಾದ್ಯಂತ ಶೀಘ್ರದಲ್ಲೇ ಅರ್ಹರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News