​ಕೊರೋನ ಹಿನ್ನೆಲೆ: ಪಾವೂರು ಗ್ರಾಮ ಮಟ್ಟದ ಸಭೆ

Update: 2020-04-01 16:05 GMT

ಮಂಗಳೂರು, ಎ.1: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಪಾವೂರು ಗ್ರಾಮದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ಇದರ ಎರಡನೇ ಹಂತದ ಸಭೆಯು ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಗ್ರಾಮದಲ್ಲಿರುವ ವಿದೇಶ ಹಾಗೂ ಇತರ ಪ್ರದೇಶಗಳಿಂದ ಬಂದ ಕ್ವಾರಂಟೈನ್‌ನಲ್ಲಿರುವವರ ಬಗ್ಗೆ ಅವರ ಆರೋಗ್ಯ ಹಾಗೂ ಇತರ ವಿಚಾರಗಳ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಪಡೆಯಲಾಯಿತು. ಗ್ರಾಮದಲ್ಲಿ ಎರಡು ತಿಂಗಳಿನ ನೀರಿನ ಬಿಲ್ಲಿನ ಮೊತ್ತವನ್ನು ವಸೂಲಿ ಮಾಡದಿರಲು ತೀರ್ಮಾನಿಸಲಾಯಿತು. ಗ್ರಾಮದಲ್ಲಿರುವ ಅಂಗಡಿ ಹಾಗೂ ಮನೆ ಮಾಲಕರಲ್ಲಿ ಎರಡು ತಿಂಗಳ ಬಾಡಿಗೆಗೆ ವಿನಾಯಿತಿ ನೀಡುವಂತೆ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪಿಡಿಒ ಸುಧಾರಾಣಿ, ಗ್ರಾಪಂ ಸದಸ್ಯರಾದ ಚಕ್ಕರ್ ಮೋನಾಕ, ಎಂಪಿ.ಹಸನ್, ವಿವೇಕ್ ರೈ, ಮಜೀದ್ ಸಾತ್ಕೋ,ವಾಮನರಾಜ್ ಪಾವೂರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News