ಉಡುಪಿ: ಅನಗತ್ಯ ತಿರುಗಾಟ; ಬೈಕ್ ಗಳು, ಬೊಲೆರೋ ಪೊಲೀಸ್ ವಶಕ್ಕೆ
Update: 2020-04-01 22:22 IST
ಉಡುಪಿ: ಕೊರೋನ ವೈರಸ್ ಹರಡುವಿಕೆ ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆದೇಶ ಹೊರಡಿಸಿದ್ದು, ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ 12 ಬೈಕ್ ಹಾಗೂ ಒಂದು ಬೊಲೆರೋ ವಾಹನವನ್ನು ಬುಧವಾರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಕಡಿಯಾಳಿ, ಬೀಡಿನಗುಡ್ಡೆ, ಕರಾವಳಿ ಜಂಕ್ಷನ್‌ನಲ್ಲಿ ತೀವ್ರ ತಪಾಸಣೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದಿನ ಬಳಕೆ ವಸ್ತುಗಳ ಖರೀದಿಗೆ ಬೆಳಗ್ಗೆ 7 ರಿಂದ 11 ರ ವರೆಗೆ ಸಮಯ ನಿಗದಿಗೊಳಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೊರಡಿಸಿದ್ದು, ರಸ್ತೆಯಲ್ಲಿ ಅನಗತ್ಯವಾಗಿ ತಿರುಗುತ್ತಿದ್ದ ವಾಹನ ಸವಾರರಿಗೆ ಪೊಲೀಸರ ಈ ದಾಳಿ ಅಚ್ಚರಿ ತಂದಿದೆ. ಪೊಲೀಸರು ಬುಧವಾರ ಖಡಕ್ ಎಚ್ಚರಿಕೆ ಕೊಟ್ಟು ವಾಹನ ಸ್ವಾಧೀನ ಪಡಿಸಿಕೊಂಡಿದ್ದಾರೆ.