ಕಾಪು: 120 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

Update: 2020-04-01 17:11 GMT

ಕಾಪು, ಎ.1: ಖುವ್ವತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಸೋಸಿಯೇಶನ್ ಪೊಲಿಪು ಹಾಗೂ ಗಲ್ಫ್ ಕಮಿಟಿಯ ಸಹಯೋಗದಲ್ಲಿ ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತ ರಿಸುವ ಕಾರ್ಯಕ್ಕೆ ಮಾ.31ರಂದು ಚಾಲನೆ ನೀಡಲಾಯಿತು.

ಕಾಪು, ಪೊಲಿಪು, ಪಾಂಗಾಳ, ಮುಳೂರು, ಉಚ್ಚಿಲ ಪರಿಸರದ ಸುಮಾರು 120 ಸರ್ವಧರ್ಮಿಯರ ಕುಟುಂಬಗಳಿಗೆ ಒಟ್ಟು 2.50ಲಕ್ಷ ರೂ. ಮೊತ್ತದ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಕ್ರಮ್ ಗುಡ್‌ವಿಲ್, ಉಪಾಧ್ಯಕ್ಷ ಅಶ್ರಫ್ ಮೈತ್ರಿ, ಕೋಶಾಧಿಕಾರಿ ಅಝೀಝ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ರಜಬ್, ಜೊತೆ ಕಾರ್ಯದರ್ಶಿ ಶಾಹೀದ್, ಹುಸೇನಾರ್, ಇಲಿಯಾಸ್, ಜಲೀಲ್, ಬಶೀರ್ ಜನಪ್ರಿಯ, ಮೊಹಮ್ಮದ್, ಅಬ್ದುಲ್ ಮಜೀದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News