×
Ad

ಉಡುಪಿ: ಬಾಡಿಗೆ ವಾಹನಗಳ ರಸ್ತೆ ತೆರಿಗೆ ವಿನಾಯಿತಿಗೆ ಮನವಿ

Update: 2020-04-01 22:43 IST

ಉಡುಪಿ, ಎ.1: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಬಸ್ಸುಗಳು, ಮ್ಯಾಕ್ಸಿಕ್ಯಾಬ್ಗಳು ಆಟೋ ರಿಕ್ಷಾ, ಕಾರು ಹಾಗೂ ಇತರೆ ಬಾಡಿಗೆ ವಾಹನ ಗಳಿಗೆ ಎರಡು ತಿಂಗಳ ರಸ್ತೆ ತೆರಿಗೆ ವಿನಾಯಿತಿ ನೀಡುವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್ ಘೋಷಣೆಯ ಬಳಿಕ ರಾಜ್ಯಾದ್ಯಂತ ಎಲ್ಲಾ ಖಾಸಗಿ ಬಸ್ ಗಳು, ಮ್ಯಾಕ್ಸಿಕ್ಯಾಬ್ಗಳು ಆಟೋ ರಿಕ್ಷಾ, ಕಾರು ಹಾಗೂ ಇತರೆ ಬಾಡಿಗೆ ವಾಹನಗಳು ರಸ್ತೆಗೆ ಸಂಚರಿಸಿದೆ ಮನೆಯಲ್ಲಿ ಇರುವುದರಿಂದ ಚಾಲಕರ ಕುಟುಂಬದ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಆದುದರಿಂದ ಮಾರ್ಚ್ ಹಾಗೂ ಹಾಗೂ ಎಪ್ರಿಲ್ ತಿಂಗಳ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು  ಪತ್ರದಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News