ಕಾಪು: ಶಾಸಕರ ಸಹಿತ ವಿವಿಧ ದಾನಿಗಳಿಂದ ಅಕ್ಕಿ ವಿತರಣೆ

Update: 2020-04-01 18:01 GMT

ಕಾಪು : ಕಾಪು ಪುರಸಭಾ ವ್ಯಾಪ್ತಿಯ ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮುತುವರ್ಜಿಯಿಂದ ಆಕ್ಕಿ ಸಹಿತ ದಿನಬಳಕೆ ಸಾಮಾಗ್ರಿ ವಿತರಣೆಗೆ ಸಿದ್ಧಗೊಂಡಿದ್ದು, ಕಾಪು ತಾಲ್ಲೂಕು ತಹಶೀಲ್ದಾರ್ ಅವರಿಗೆ ಬುಧವಾರ ಹಸ್ತಾಂತರಿಸಲಾಯಿತು.

ದಾನಿಗಳ ಸಹಕಾರದಿಂದ 600 ಕೆಜಿ ಅಕ್ಕಿ ಹಾಗೂ ಎಣ್ಣೆ, ಬೇಳೆ ಸಹಿತ ಇತ್ಯಾದಿ ದಿನಬಳಕೆಯ ಸಾಮಾನುಗಳನ್ನು ನೀಡಲಾಗಿದೆ. ಕಾಪು ಪುರಸಭೆಯ ವ್ಯಾಪ್ತಿಯಲ್ಲಿ ಪಡಿತರ ಚೀಟಿಯನ್ನು ಹೊಂದಿರದ ಕುಟುಂಬಗಳನ್ನು ಆಯ್ದು ಕಾಪು ತಹಶೀಲ್ದಾರರ ಮುಖಾಂತರ ಈ ದಿನಬಳಕೆ ಸಾಮಾಗ್ರಿಗಳನ್ನು ವಿತರಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾಪು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಪ್ರಮುಖರಾದ ಪ್ರವೀಣ್ ಪೂಜಾರಿ, ಚಂದ್ರ ಮಲ್ಲಾರು, ಪ್ರಸನ್ನ ಭಟ್, ಗೋಪಾಲಕೃಷ್ಣ ರಾವ್, ಸಚಿನ್ ಪುತ್ರನ್, ಮೊದಲಾದವರು ಉಪಸ್ಥಿತರಿದ್ದರು.

ರಿಕ್ಷಾ ಚಾಲಕರಿಗೆ ಅಕ್ಕಿ ವಿತರಣೆ: ಕಾಪು ರಿಕ್ಷಾ ಚಾಲಕರಿಗೆ ರಿಕ್ಷಾ ಯೂನಿಯನ್ ವತಿಯಿಂದ ಅಕ್ಕಿ ಮತ್ತು ಯೂನಿಯನ್ ಅಧ್ಯಕ್ಷ ಗಂಗಾಧರ ಸುವರ್ಣ ಅವರ ವೈಯಕ್ತಿಕ ನೆಲೆಯಲ್ಲಿ ಹಣಕಾಸಿನ ನೆರವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಮೂಲಕ ಬುಧವಾರ ಹಸ್ತಾಂತರಿಸಲಾಯಿತು.

ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪುರಸಭೆ ಸದಸ್ಯ ಅನಿಲ್ ಕುಮಾರ್, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕಾಪು ಕ್ರೈಂ ಎಸ್ಸೈ ಐ.ಎಸ್. ಗಡ್ಡೇಕರ್, ರಿಕ್ಷಾ ಯೂನಿಯನ್‍ನ ಪದಾಧಿಕಾರಿಗಳಾದ ಚಂದ್ರ ಮಲ್ಲಾರು, ಉಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಎಂಆರ್‍ಜಿ ಗ್ರೂಪ್‍ನಿಂದ ಅಕ್ಕಿ:  ಎಂಆರ್‍ಜಿ ಗ್ರೂಫ್ಸ್‍ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಇವರ ವತಿಯಿಂದ ಕಾಪು ತಾಲೂಕಿನ 500 ಕುಟುಂಬಗಳಿಗೆ ಹತ್ತು ದಿನಕ್ಕೆ ಬೇಕಾಗುವಷ್ಟು ಪಡಿತರ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅವರು ಚಾಲನೆ ನೀಡಿದರು.

ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್,  ಕಾಪು ಪುರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಗುಲಾಬಿ ಪಾಲನ್, ಸಮಾಜ ಸೇವಕ ಲೀಲಾಧರ ಶೆಟ್ಟಿ, ಸಂಘ ಚಾಲಕ ತಾರನಾಥ್ ಕೋಟ್ಯಾನ್, ಜಗದೀಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News