ಕೋವಿಡ್-19: ಅಮೆರಿಕದಲ್ಲಿ ಒಂದೂವರೆ ತಿಂಗಳ ಹಸುಳೆ ಸಾವು

Update: 2020-04-02 07:11 GMT

 ನ್ಯೂಯಾರ್ಕ್, ಎ.2: ಕೋವಿಡ್ -19 ಗೆ ಸಂಬಂಧಿಸಿದ ತೊಡಕುಗಳಿಂದ ಒಂದೂವರೆ  ತಿಂಗಳ  ಹಸುಳೆ ಅಮೆರಿಕದಲ್ಲಿ ಸಾವನ್ನಪ್ಪಿದೆ ಎಂದು ಅಮೆರಿಕದ  ಕನೆಕ್ಟಿಕಟ್ ಗವರ್ನರ್ ನೆಡ್ ಲ್ಯಾಮಂಟ್ ತಿಳಿಸಿದ್ದಾರೆ.

ಕೊರೋನ ವೈರಸ್ ನಿಂದ  ಮೃತಪಟ್ಟ ಕಿರಿಯ ವಯಸ್ಸಿನ   ಸಾವುಗಳಲ್ಲಿ ಒಂದಾಗಿದೆ.

ನವಜಾತ ಶಿಶುವನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಲಾಗಿತ್ತು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು   ಮೃತಪಟ್ಟಿದೆ  ಎಂದು ಗವರ್ನರ್ ನೆಡ್ ಲ್ಯಾಮಂಟ್ ಬುಧವಾರ ಟ್ವೀಟ್ ಮಾಡಿದ್ದಾರೆ.

ನವಜಾತ ಶಿಶುವಿನಲ್ಲಿ  ಕೊರೋನ ವೈರಸ್  ಪೊಸಿಟಿವ್ ಕಳೆದ ರಾತ್ರಿ ದೃಢಪಟ್ಟಿದೆ  ಎಂದು ಲ್ಯಾಮಂಟ್ ಹೇಳಿದರು.

ಅಮೆರಿಕದಲ್ಲಿ  4,476 ಸಾವು ಸಂಭವಿಸಿದೆ. ವೇಗವಾಗಿ ಹರಡುವ ವೈರಸ್  ಇಳಿ ವಯಸ್ಸಿನವರಿಗೆ ಹೆಚ್ಚು ಅಪಾಯಕಾರಿ ಎಂದು ನಂಬಲಾಗಿದೆ, ಆದರೂ ಇದು ಹದಿಹರೆಯದವರಿಗೆ    ಸಮಸ್ಯೆಯನ್ನು ತಂದೊಡ್ಡಿದೆ. ಹಲವು ಮಂದಿ ಆಸ್ಪತ್ರೆ ಸೇರಿ ಚೇತರಿಸಿಕೊಂಡಿದ್ದಾರೆ

ನ್ಯೂಯಾರ್ಕ್ ವಿಶೇಷವಾಗಿ ಕೋವಿಡ್ -19 ನಿಂದ ತೀವ್ರ  ತೊಂದರೆಗೊಳಗಾಗಿದೆ. ಇಲ್ಲಿ  ಸುಮಾರು 2,000  ಮಂದಿ ಕೊರೋನಕ್ಕೆ  ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News