ಮಂಗಳೂರು: ನಿಯಮ ಉಲ್ಲಂಘನೆ; 154 ವಾಹನಗಳ ವಶ

Update: 2020-04-02 11:55 GMT

ಮಂಗಳೂರು, ಎ.2: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಜಿಲ್ಲಾದ್ಯಂತ ಸೆ.144 (3)ನ್ನು ವಿಧಿಸಿದ ಸಂದರ್ಭ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾವಣೆ ಮಾಡಿದ 154 ವಾಹನ ಚಾಲಕರು/ಸವಾರರ ಮೇಲೆ ಪ್ರಕರಣ ದಾಖಲಿಸಿರುವ ಮಂಗಳೂರು ಪೊಲೀಸರು ಅವರ ವಾಹನಗಳನ್ನು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗಾಗಿ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವ ಮಧ್ಯೆಯೇ ಕೆಲವರು ಬೇಕಾಬಿಟ್ಟಿ ಅವಧಿ ಮೀರಿ ವಾಹನ ಚಲಾಯಿಸುತ್ತಿದ್ದರು. ಈ ಮಧ್ಯೆ ಮಂಗಳೂರು ಪೊಲೀಸ್ ಆಯುಕ್ತರು ಗುರುವಾರ ಬೆಳಗ್ಗೆ ಟ್ವೀಟ್ ಮಾಡಿ ಮಧ್ಯಾಹ್ನ 12:30ರ ಬಳಿಕ ವಾಹನಗಳನ್ನು ಚಲಾಯಿಸಿದರೆ ಅವುಗಳನ್ನು ವಶಪಡಿಸಲಾಗುವುದು ಎಂದಿದ್ದರು. ಆದರೆ, ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸವಾರರು/ಚಾಲಕರು ವಾಹನ ಚಲಾಯಿಸಿದ್ದರು. ತುರ್ತು ಸೇವೆಗೆ ಸಂಬಂಧಿಸಿ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News