ಲಾಕ್‌ಡೌನ್ ಮಧ್ಯೆ ಸಂಗೀತ ಕಲಿಯಲು ರಿಯಾಝ್ ಅಪ್ಲಿಕೇಶ್
Update: 2020-04-02 17:30 IST
ಮಂಗಳೂರು, ಎ.2: ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದರೂ ಶಾಸ್ತ್ರೀಯ ಸಂಗೀತ ಕಲಿಯಲು ಮತ್ತು ಹಾಡುವ ಕೌಶಲ್ಯ ಅಭಿವೃದ್ಧಿಪಡಿಸಲು ‘ರಿಯಾಝ್’ ಅಪ್ಲಿಕೇಶನ್ ಸಹಕಾರಿಯಾಗಿದೆ.
ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಿರುವ ‘ರಿಯಾಝ್’ ಸಂಗೀತ ಪ್ರಿಯರಿಗೆ ಸಂಪೂರ್ಣವಾಗಿ ಕಲಿಯಲು ಅನುವು ಮಾಡಿಕೊಡುತ್ತದೆ. ಸುಸಜ್ಜಿತ ಕೋರ್ಸ್‌ಗಳು, ನೂರಾರು ಅಭ್ಯಾಸ ಪಾಠಗಳನ್ನು ಈ ಆ್ಯಪ್ ಹೊಂದಿದೆ. ಸ್ಮಾರ್ಟ್ ತನ್ಪುರಾ, ಬ್ರೀತ್ ಮಾನಿಟರ್ ಮತ್ತು ಗಾಯನ ಮಾನಿಟರ್‌ನಂತಹ ಹಾಡಲು ಅಗತ್ಯವಾದ ಸಾಧನಗಳನ್ನು ಹೊಂದಿರುವ ಪ್ಯಾಕ್ ಆಗಿದೆ ಎಂದು ರಿಯಾಝ್‌ನ ಸ್ಥಾಪಕರಲ್ಲೊಬ್ಬರಾಗಿರುವ ಗೋಪಾಲ ತಿಳಿಸಿದ್ದಾರೆ.
ಲಾಕ್‌ಡೌನ್‌ನ ಈ ಕಷ್ಟದ ಸಮಯದಲ್ಲಿ ಸಂಗೀತ ಪ್ರಿಯರಿಗೆ ಬೆಂಬಲ ನೀಡಲು ನಾವು ಇಷ್ಟಪಡುತ್ತೇವೆ ಎಂದು ರಿಯಾಝ್‌ನ ಸಹ -ಸಂಸ್ಥಾಪಕ ಮತ್ತು ಮಾರ್ಕೆಟಿಂಗ್ ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಅನಿಲ್ ಕುಮಾರ್ ಅಲಹಾಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.