ಕೇರಳ ಸಂಪರ್ಕ ರಸ್ತೆಯನ್ನು ಮತ್ತೆ ಮುಚ್ಚಿಸಿ ಎಚ್ಚರಿಕೆ ನೀಡಿದ ಪೋಲಿಸರು

Update: 2020-04-02 16:12 GMT

ಕೊಣಾಜೆ: ಲಾಕ್ ಡೌನ್ ನಿಮಿತ್ತ ಹಾಗೂ ಕಾಸರಗೋಡಿನಲ್ಲಿ ಕೊರೋನ‌ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾದ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಕೇರಳ ಕರ್ನಾಟಕ ಗಡಿಭಾಗವಾದ ಇರಾ ಹಾಗೂ ವರ್ಕಾಡಿ ಪಂಚಾಯತ್ ಗೊಳಪಟ್ಟ ಬಾಳೆಪುಣಿಯಲ್ಲಿ ರಸ್ತೆ ಮುಚ್ಚಿರುವುದನ್ನು ಕಿಡಿಗೇಡಿಗಳು ತೆರವುಗೊಳಿಸಿದ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನಲೆಯಲ್ಲಿ ಬಂಟ್ವಾಳ ತಹಶಿಲ್ದಾರ್ ಶ್ರೀಮತಿ ರಶ್ಮಿಯವರ ಸೂಚನೆಯಂತೆ ಇಂದು ಬಂಟ್ವಾಳ ಗ್ರಾಮಾಂತರ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಎಮ್.ಎಸ್.ಪ್ರಸನ್ನರವರು ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ಸಹಕಾರದ ಮೂಲಕ ಮುಚ್ಚಿಸಿದ್ದಾರೆ.
ಯಾರದಾರೂ ಕಾನೂನು ಕೈಗೆತ್ತಿಕೊಂಡು ರಸ್ತೆ ತೆರವುಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ತಪ್ಪು ಸಂದೇಶಗಳನ್ನು ಹರಡಿದಲ್ಲಿ ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕರನ್ನು ಅವರು ಎಚ್ಚರಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ಎಂ.ಬಿ.ಉಮ್ಮರ್, ಮೊಯಿದಿಕುಂಞಿ, ಗೋಪಾಲ ಅಶ್ವತ್ಥಡಿ, ಇರಾ ಬೀಟ್ ಪೋಲಿಸ್ ಶಿವಕುಮಾರ್, ಮಾಜಿ ಪಂಚಾಯತ್ ಸದಸ್ಯರಾದ ಸಿ.ಹೆಚ್.ಮೊಹಮ್ಮದ್, ಮಸೀದಿಯ ಅಧ್ಯಕ್ಷರಾದ ಎಂ.ಬಿ.ಸಖಾಫಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಶೀಲಾ, ಗ್ರಾಮಕರಣಿಕರಾದ ತನ್ವಿ ಪುತ್ರನ್, ಕಾರ್ಯದರ್ಶಿ ನಳಿನಿ ಎ.ಕೆ, ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ಗುಲಾಬಿ, ರಂಜನ್ ಶೆಟ್ಟಿ, ಗ್ರಾಮಸ್ಥರು ಸಹಕರಿಸಿದರು. ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿ ಈ ಕಾರ್ಯಾಚರಣೆ ಮಾಡಲಾಗಿದ್ದು, ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಕೆಲದಿನಗಳ ಮಟ್ಟಿಗೆ ಸಾರ್ವಜನಿಕರು ಸಹಕರಿಸುವಂತೆ ಬಂಟ್ವಾಳ ತಾಲೂಕಿನ ತಹಶಿಲ್ದಾರ್ ಶ್ರೀಮತಿ ರಶ್ಮಿ, ಬಂಟ್ವಾಳ ಗ್ರಾಮಾಂತರ ಸಬ್ಇನ್ಸ್ ಪೆಕ್ಟರ್ ಎಮ್.ಎಸ್. ಪ್ರಸನ್ನ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರಾ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಯವರು ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News