ಇನ್ಫೋಸಿಸ್‌ನಿಂದ 54ಲಕ್ಷ ರೂ. ಸಲಕರಣೆ ಹಸ್ತಾಂತರ

Update: 2020-04-02 16:41 GMT

ಉಡುಪಿ, ಎ.2: ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜಿಲ್ಲಾಧಿಕಾರಿಯವರ ಮನವಿ ಮೇರೆಗೆ ಕೋವಿಡ್-19 ಸೋಂಕು ನಿವಾರಣೆಗೆ ಸಂಬಂಧಿಸಿದ 54 ಲಕ್ಷ ರೂ.ಮೌಲ್ಯದ ವಿವಿಧ ವೈದ್ಯಕೀಯ ಸಲಕರಣೆಗಳನ್ನು ಬುಧವಾರ ಉಡುಪಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.

ಇವುಗಳಲ್ಲಿ 4,000 ಎನ್95 ಮಾಸ್ಕ್, 4000 ಸ್ಯಾನಿಟೈಸರ್, 25000 ಟ್ರಿಪಲ್ ಲೇಯರ್ ಮಾಸ್ಕ್, 10000 ಸರ್ಜಿಕಲ್ ಗ್ಲೌಸ್, 1500 ಪಿಪಿಇ ಕಿಟ್ ಸೇರಿವೆ. ಕೋರಿಕೆ ಸಲ್ಲಿಸಿದ 24 ಗಂಟೆಗಳಲ್ಲೇ ಸಲಕರಣೆಗಳನ್ನು ನೀಡಿರುವುದಕ್ಕಾಗಿ ಪೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಡಾ.ರಾಮದಾಸ ಕಾಮತ್ ಅವರಿಗೆ ಅಭಾರಿಯಾಗಿರುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News