ಹೋಮ್ ಕ್ವಾರಂಟೈನ್ ಉಲ್ಲಂಘನೆ: ಯುವಕ ಪೊಲೀಸರ ವಶಕ್ಕೆ

Update: 2020-04-02 16:43 GMT

ಕೋಟ, ಎ.2: ದುಬಾಯಿಯಿಂದ ಬಂದು ಕೋವಿಡ್-19ಕ್ಕಾಗಿ ಹೋಮ್ ಕ್ವಾರಂಟೈನ್‌ನಲ್ಲಿದ್ದ ಸಾಸ್ತಾನ ಗುಂಡ್ಮಿಯ ಝೀಮಾನ್ (20), ಕಾನೂನನ್ನು ಉಲ್ಲಂಘಿಸಿ ಕೋಡಿ-ಸಾಸ್ತಾನ ರಸ್ತೆಯಲ್ಲಿ ತಿರುಗಾಡಿಕೊಂಡಿದ್ದು, ಸಾರ್ವಜನಿಕ ರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಕೋಟ ಠಾಣೆಯ ಪೊಲೀಸರು ಬುಧವಾರ ಸಂಜೆ 4:30ರ ಸುಮಾರಿಗೆ ಆತನನ್ನು ಆತ ಚಲಾಯಿಸುತಿದ್ದ ಸ್ಕೂಟಿಯೊಂದಿಗೆ ವಶಕ್ಕೆ ಪಡೆದು ಝೀಮಾನ್ ವಿರುದ್ಧ ಸಾಂಕ್ರಾಮಿಕ ರೋಗ ನಿರೋಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News